ಲೈಂಗಿಕ ಕಿರುಕುಳ: ಮನನೊಂದು ಸ್ವತಃ ಬೆಂಕಿ ಹಚ್ಚಿಕೊಂಡ ಬಾಲಕಿ

ಜಾಟ್ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರಿಂದ ನಿರಂತರ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಅಪ್ರಾಪ್ತ ದಲಿತ ಬಾಲಕಿಯೊಬ್ಬಳು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಚಂಡಿಗಢ(ಪಂಜಾಬ್): ಜಾಟ್ ಸಮುದಾಯಕ್ಕೆ ಸೇರಿದ ನಾಲ್ವರು ಯುವಕರಿಂದ ನಿರಂತರ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ವಿಧಿಯಿಲ್ಲದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಇದೀಗ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ.

ಕಳೆದ ವಾರ ತಾನು ಬಸ್ಸಿನಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿರಬೇಕಾದರೆ ನಾಲ್ವರಲ್ಲಿ ಒಬ್ಬಾತ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು ಪ್ರತಿಭಟಿಸಿದ ಬಾಲಕಿಯ ಕೆನ್ನೆಗೆ ಮಣಿ ಎಂಬಾತ ಹೊಡೆದಿದ್ದಾನೆ. ಇದರಿಂದ ಮನನೊಂದ ಬಾಲಕಿ ಮನೆಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಶೇ. 70ರಷ್ಟು ಸುಟ್ಟ ಗಾಯಗಳಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. 

ತಮ್ಮ ಗ್ರಾಮದ ಸವರ್ಣೀಯ ಪುರುಷರು ತನಗೆ ಕಿರುಕುಳ ನೀಡಿದ್ದು, ಮನೆಯಲ್ಲಿ ಗೊತ್ತಾದರೆ ಎಲ್ಲಿ ಶಾಲೆಗೆ ಕಳಿಸುವುದನ್ನು ನಿಲ್ಲಿಸುತ್ತಾರೆ ಎಂಬ ಭಯದಿಂದ ತಾನು ಪೋಷಕರಿಗೆ ಈ ವಿಷಯ ತಿಳಿಸಿಲ್ಲ ಎಂದು ಬಾಲಕಿ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾಳೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com