ಮುಸ್ಲಿಮರೂ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನ ಆಚರಿಸಿ: ದಾರುಲ್ ಉಲೂಂ

ಮುಸ್ಲಿಮರು ಕೂಡಾ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕು ಎಂದು ಪ್ರಮುಖ ಇಸ್ಲಾಮಿಕ್ ಧರ್ಮಶಾಲೆಯಾದ ದಾರೂಲ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಕ್ನೋ: ಮುಸ್ಲಿಮರು ಕೂಡಾ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕು ಎಂದು ಪ್ರಮುಖ ಇಸ್ಲಾಮಿಕ್ ಧರ್ಮಶಾಲೆಯಾದ ದಾರೂಲ್ ಉಲೂಂ ಹೇಳಿದ್ದೆ. ಸ್ವಾತಂತ್ರ್ಯ ದಿನದಂದು ಎಲ್ಲ ಮದ್ರಾಸಾ ಮತ್ತು ಇನ್ನಿತರ ಇಸ್ಲಾಂ ಧರ್ಮದ ಶಾಲೆಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕೆಂದು ಉಲೂಂ ಹೇಳಿದೆ.

ನಮ್ಮನ್ನು ಯಾಕೆ ಬೇರೆಯವರಂತೆ ಕಾಣಬೇಕು. ಇದು ನಮ್ಮ ದೇಶ, ಇದು ನಮ್ಮ ಭೂಮಿ. ನಮ್ಮ ದೇಶ ಭಕ್ತಿಯ ಬಗ್ಗೆ ಯಾರೂ ತಪ್ಪಾಗಿ ತಿಳಿದುಕೊಳ್ಳಬಾರದು. ಆದ್ದರಿಂದ ಎಲ್ಲ ಮುಸ್ಲಿಮರು ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಬೇಕೆಂದು ಉತ್ತರ ಪ್ರದೇಶದ ದಿಯೋಬಂದ್ ದಾರುಲ್ ಉಲೂಂ ಧರ್ಮಶಾಲೆಯ ವಕ್ತಾರ ಮೌಲಾನಾ ಅಶ್ರಫ್  ಉಸ್ಮಾನಿ ಹೇಳಿದ್ದಾರೆ.

ಮದ್ರಾಸಾಗಳು ಸ್ವಾತಂತ್ರ್ಯ ದಿನ ಆಚರಿಸುವುದಿಲ್ಲ ಎಂಬ ತಪ್ಪಾದ ನಂಬಿಕೆಯಿದೆ. ಅದನ್ನು ತಿದ್ದಬೇಕಿದೆ ಎಂದು ಉಸ್ಮಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com