ಹಸ್ತಮೈಥುನ ಮಾಡಿಕೊಂಡಿಲ್ಲ, ಮೂತ್ರ ವಿಸರ್ಜನೆ ಮಾಡುತ್ತಿದ್ದೆ ಅಷ್ಟೆ: ಗೋಪಾಲ್ ವಾಲ್ಮಿಕಿ

ನಾನು ಹಸ್ತಮೈಥುನ ಮಾಡಿಕೊಂಡಿಲ್ಲ, ಮೂತ್ರ ವಿಸರ್ಜನೆ ಮಾಡುತ್ತಿದ್ದೆ ಅಷ್ಟೆ ಎಂದು ನಡುರಸ್ತೆಯಲ್ಲೇ ಅಮೆರಿಕ ಮಹಿಳೆಯ ಎದುರು ಹಸ್ತಮೈಥುನ ಮಾಡಿಕೊಂಡು,...
ಗೋಪಾಲ್ ವಾಲ್ಮಿಕಿ
ಗೋಪಾಲ್ ವಾಲ್ಮಿಕಿ

ಮುಂಬಯಿ: ನಾನು ಹಸ್ತಮೈಥುನ ಮಾಡಿಕೊಂಡಿಲ್ಲ, ಮೂತ್ರ ವಿಸರ್ಜನೆ ಮಾಡುತ್ತಿದ್ದೆ ಅಷ್ಟೆ ಎಂದು ನಡುರಸ್ತೆಯಲ್ಲೇ ಅಮೆರಿಕ ಮಹಿಳೆಯ ಎದುರು ಹಸ್ತಮೈಥುನ ಮಾಡಿಕೊಂಡು, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಗೋಪಾಲ್ ವಾಲ್ಮಿಕಿ ಹೇಳಿದ್ದಾನೆ.

ಬಾಂಬೆ ಸ್ಟಾಕ್ ಎಕ್ಸ್ ಚೆಂಜ್ ನಲ್ಲಿ ಟ್ರೈನಿ ಶೇರ್ ಟ್ರೆಡರ್ ಆಗಿ ಕೆಲಸ ಮಾಡುತ್ತಿರುವ 20 ವರ್ಷದ ಗೋಪಾಲ್ ವಾಲ್ಮಿಕಿಯನ್ನು ಇಂದು ಬೆಳಗ್ಗೆ ಮುಂಬೈನ ಕೊಲಬ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ತಾನು ಹಸ್ತಮೈಥುನ ಮಾಡಿಕೊಂಡಿಲ್ಲ, ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಮಹಿಳೆ ತನ್ನನ್ನು ನೋಡಿದರು ಅಷ್ಟೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಕಳೆದ ಸೋಮವಾರ ಗೋಪಾಲ್ ವಾಲ್ಮಿಕಿ ತನ್ನ ಎದುರೇ ಹಸ್ತಮೈಥುನ ಮಾಡಿಕೊಂಡ ಎಂದು ಆರೋಪಿಸಿರುವ ಅಮೆರಿಕ ಮೂಲದ ಲೇಖಕಿ ಮರಿಯಾನಾ ಆಬ್‌ಡೋ ಅವರು, ಆತನ ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಟ್ವಿಟರ್ ಹಾಕಿ ಘಟನೆಯನ್ನು ವಿವರಿಸಿದ್ದರು. ಇದು ಸಾಮಾಜಿಕ ತಾಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ಮರಿಯಾನಾ ಅವರ ಟ್ವಿಟರ್‌ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಕಾರ್ಯಾಲಯ, ಆರೋಪಿಯ ಬಂಧನಕ್ಕೆ ಕಾರ್ಯಾಚರಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು, ಮರಿಯಾನಾ ಅವರ ಹೇಳಿಕೆ ಪಡೆದಿದ್ದ ದಕ್ಷಿಣ ಮುಂಬೈನ ಕೊಲಬ ಪೊಲೀಸ್ ಠಾಣೆಯ ಪೊಲೀಸರು ಇಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com