ಇಬ್ಬರು ಆಪ್ ಸಂಸದರು ಸಸ್ಪೆಂಡ್

ಪಂಜಾಬ್ ಇಬ್ಬರು ಸಂಸದರನ್ನು ಆಮ್ ಆದ್ಮಿ ಪಾರ್ಟಿ ಶನಿವಾರ ಅಮಾನತುಗೊಳಿಸಿದೆ...
ಧರಮ್ ವೀರ ಗಾಂಧಿ, ಹರಿಂದರ್ ಸಿಂಗ್ ಖಲ್ಸಾ
ಧರಮ್ ವೀರ ಗಾಂಧಿ, ಹರಿಂದರ್ ಸಿಂಗ್ ಖಲ್ಸಾ
Updated on: 
ನವದೆಹಲಿ: ಪಂಜಾಬ್ ಇಬ್ಬರು ಸಂಸದರನ್ನು ಆಮ್ ಆದ್ಮಿ ಪಾರ್ಟಿ ಶನಿವಾರ ಅಮಾನತುಗೊಳಿಸಿದೆ. 
ಉಚ್ಚಾಟಿತ ನಾಯಕ ಯೋಗೇಂದ್ರ ಯಾದವ್ ರನ್ನು ಬೆಂಬಲಿಸಿದ್ದಕ್ಕಾಗಿ ಸಂಸದ ಧರಮ್ ವೀರ ಗಾಂಧಿಯನ್ನೂ, ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಹರಿಂದರ್ ಸಿಂಗ್ ಖಲ್ಸಾರನ್ನೂ ಸಸ್ಪೆಂಡ್ ಮಾಡಿರುವುದಾಗಿ ಆಪ್ ಘೋಷಿಸಿದೆ. 
ಅತೃಪ್ತ ಸಂಸದರಿಗೆ ಈ ಮೊದಲು ವಿಪ್ ನೀಡಿದ್ದ ಆಪ್, ಈ ಸಂಸದರು ಬಿಜೆಪಿ-ಅಕಾಲಿದಳದೊಂದಿಗೆ ಕೈ ಜೋಡಿಸಿದ್ದರ ಬಗ್ಗೆಯೂ ಅಸಮಾಧಾನಗೊಂಡಿತ್ತು. 
ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ತೆಗೆದುಕೊಂಡ ಈ ತೀರ್ಮಾನಕ್ಕೆ ಹರಿದ್ವಾರದಲ್ಲಿದ್ದ ಸಿಎಂ ಕೇಜ್ರಿವಾಲ್ ಫೋನ್ ಮೂಲಕವೇ ಸಮ್ಮತಿ ನೀಡಿದ್ದರು. ಆಪ್, ಪಂಜಾಬ್ ನಲ್ಲಿ ಮಾತ್ರ 4 ಸ್ಥಾನಗಳನ್ನು ಗೆದ್ದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com