

ಮುಂಬೈ: ಬಾಲಿವುಡ್ ಸಿನಿಮಾವನ್ನೇ ಮೀರಿಸುವ ಥ್ರಿಲ್ಲರ್‍ನಂತೆ ಸಾಗುತ್ತಿರುವ ಶೀನಾ ಬೋರಾ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಶೀನಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ, ತನ್ನ 24 ವರ್ಷದ ಮಗಳು ಸತ್ತಿಲ್ಲ. ಬದುಕಿದ್ದು, ಅಮೆರಿಕದಲ್ಲಿದ್ದಾಳೆ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, ತನ್ನ ಮಗಳು ಶೀನಾ ಸತ್ತಿಲ್ಲ. ಆಕೆ ಬದುಕಿದ್ದು, ಅಮೆರಿಕದಲ್ಲಿದಾಳೆ. ಆದರೆ ಆಕೆ ನನ್ನನ್ನು ದ್ವೇಷಿಸುತ್ತಿರುವುದರಿಂದ ನನ್ನ ನೋಡಲು ಬರುತ್ತಿಲ್ಲ ಎಂದು 9ಎಕ್ಸ್ ಮಾಧ್ಯಮ ಸಮೂಹದ ಸಹಸಂಸ್ಥಾಪಕಿ ಹೇಳುತ್ತಿದ್ದಾಳೆ. ಅಲ್ಲದೆ ಇಂದ್ರಾಣಿ ಇದನ್ನು ಬಿಟ್ಟು ಬೇರೆ ಯಾವ ವಿಷಯವನ್ನು ಪೊಲೀಸರ ಮುಂದೆ ಬಾಯ್ಬಿಡುತ್ತಿಲ್ಲ ಎನ್ನಲಾಗಿದೆ.
'ಶೀನಾ ನನ್ನ ತಂಗಿ ಎಂದು ನಾನು ಬೇರೆಯವರಿಗೆ ಪರಿಚಯ ಮಾಡಿಸುತ್ತಿದ್ದರಿಂದ ಆಕೆಗೆ ನನ್ನ ಮೇಲೆ ದ್ವೇಷ ಇದೆ. ಆದರೆ ಅವಳನ್ನು ನಾನು ಕೊಲೆ ಮಾಡಿಲ್ಲ' ಎಂದು ಇಂದ್ರಾಣಿ ಮುಖರ್ಜಿ ಹೇಳಿದ್ದಾಳೆ.