

ಚೆನ್ನೈ: ಹೆಸರಾಂತ ಕೈಗಾರಿಕೋದ್ಯಮಿ, ರು.10 ಸಾವಿರ ಕೋಟಿ ಮೌಲ್ಯದ ಚೆಟ್ಟಿನಾಡ್ ಸಮೂಹ ಸಂಸ್ಥೆಯ ಸ್ಥಾಪಕ ಎಂ.ಎ.ಎಂ.ರಾಮಸ್ವಾಮಿ (84) ನಿಧನರಾಗಿದ್ದಾರೆ.
ಅವರು ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೂತ್ರಪಿಂಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಬುಧವಾರ ಸಂಜೆ 4.30ಕ್ಕೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಡಿ.6ರಂದು ತಿರುವತ್ತಿಯೂರಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು ಸಂದಿದ್ದವು. ಕುದುರೆಗಳ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು.
ಜೆಡಿಎಸ್‍ನಿಂದ ರಾಜ್ಯಸಭೆ ಸದಸ್ಯರಾಗಿದ್ದರು. ಅವರು ಸ್ಥಾಪಿಸಿದ್ದ ಚೆಟ್ಟಿನಾಡ್ ಸಮೂಹ ಸಂಸ್ಥೆಗಳು ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಯಾಗಿ ರೂಪುಗೊಂಡಿತ್ತು. ಚೆಟ್ಟಿನಾಡ್ ಅರಮನೆಗೆ ಸಂಬಂಧಿಸಿದಂತೆ ರಾಮಸ್ವಾಮಿ ಮತ್ತು ಪುತ್ರ ನಡುವೆ ಇತ್ತೀಚೆಗೆ ವಿವಾದ ತಲೆದೋರಿತ್ತು.