ಭಾರತಕ್ಕೂ ಯುದ್ಧ ವಿಸ್ತರಿಸುತ್ತೇವೆಂದ ಐಎಸ್

ತಮ್ಮ ಯುದ್ಧವನ್ನು ಭಾರತಕ್ಕೂ ವಿಸ್ತರಿಸುವುದಾಗಿ ಇಸ್ಲಾಮಿಕ್ ಉಗ್ರರು ಶಪಥ ಮಾಡಿದ್ದಾರೆ...
ಇಸಿಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
ಇಸಿಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
Updated on: 

ನವದೆಹಲಿ: ತಮ್ಮ ಯುದ್ಧವನ್ನು ಭಾರತಕ್ಕೂ ವಿಸ್ತರಿಸುವುದಾಗಿ ಇಸ್ಲಾಮಿಕ್ ಉಗ್ರರು ಶಪಥ ಮಾಡಿದ್ದಾರೆ.

ಮಂಗಳವಾರ ಆನ್‍ಲೈನ್‍ನಲ್ಲಿ ಬಿಡುಗಡೆಗೊಳಿಸಲಾದ ಇಸ್ಲಾಮಿಕ್ ಪ್ರಭುತ್ವ ಪ್ರಣಾಳಿಕೆ `ಬ್ಲ್ಯಾಕ್ ಫ್ಲ್ಯಾಗ್ಸ್'ನಲ್ಲಿ ಉಗ್ರರು ಇದನ್ನು ತಿಳಿಸಿದ್ದು, ದಾದ್ರಿ ಹತ್ಯೆಯನ್ನೂ ಇದರಲ್ಲಿ ಪರೋಕ್ಷವಾಗಿ  ಉಲ್ಲೇಖಿಸಿದ್ದಾರೆ ಎಂದು `ಇಂಡಿಯನ್ ಎಕ್ಸ್‍ಪ್ರೆಸ್' ವರದಿ ಮಾಡಿದೆ. ಈಗ ನಾವು ಇರಾಕ್ ಮತ್ತು ಸಿರಿಯಾದಿಂದ ಆಚೆಗೆ ನಮ್ಮ ಯುದ್ಧವನ್ನು ಚಾಚಲಿದ್ದೇವೆ. ಭಾರತ, ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನ ಮತ್ತಿತರ ದೇಶಗಳಿಗೆ ವಿಸ್ತರಿಸಲಿದ್ದೇವೆ ಎಂದಿರುವ ಉಗ್ರರು ಭಾರತದ ಸಾಮಾಜಿಕ ರಾಜಕೀಯ ಸನ್ನಿವೇಶವನ್ನು ಎಳೆದುತಂದಿದ್ದಾರೆ.

ಗೋಮಾಂಸ ತಿನ್ನುವ ಮುಸ್ಲಿಮರನ್ನು ಕೊಲ್ಲುವ ಹಿಂದೂಗಳ ಚಳವಳಿ ಹೆಚ್ಚುತ್ತಿದೆ. ಪ್ರಧಾನಿ ಮೋದಿ ಬಲಪಂಥೀಯವಾದಿಯಾಗಿದ್ದು, ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಪ್ರಚೋದಿಸುತ್ತಿದ್ದಾರೆ. ಮೋದಿ  ಆಯುಧಗಳ ಭಕ್ತರಾಗಿದ್ದು, ಮುಸ್ಲಿಮರ ವಿರುದ್ಧ ಯುದ್ಧಕ್ಕಾಗಿ ರಾಜಕೀಯ ಬಣವನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com