ಹುಣಸೂರು : ಚೆನ್ನೈನ ಮಳೆಗೆ ತಾಲೂಕಿನ ಬಿಳಿಕೆರೆ ಗ್ರಾಮದ ಸಾಫ್ಟ್ ವೇರ್ ಎಂಜಿನಿಯರ್‍ರೊಬ್ಬರು ಸಿಲುಕಿಕೊಂಡಿದ್ದಾರೆ.
ಹುಣಸೂರಿನ ಗಾಯತ್ರಿ -ಜಯೇಂದ್ರ ದಂಪತಿ ಪುತ್ರ ಸುಧೀಂದ್ರ ಗೌಡ 3 ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. 6 ತಿಂಗಳ ಹಿಂದೆ ಚೆನ್ನೈನ ಐಟಿಬಿಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸೇರಿದ್ದರು.
3 ದಿನಗಳ ಹಿಂದೆ ಮನೆಯವರು ದೂರವಾಣಿ ಮೂಲಕ ಸಂಪರ್ಕಿಸಿದ್ದಾಗ ಮನೆತುಂಬ ನೀರು ತುಂಬಿದ್ದು ಎದುರು ಮನೆಯವರೊಂದಿಗೆ ಸುರಕ್ಷಿತವಾಗಿದ್ದೇನೆ. ಇನ್ನೊಂದು ದಿನದಲ್ಲಿ ಹೊರಟು ಬರುತ್ತೇನೆ ಎಂದಿದ್ದ. ಮಾರನೆ ದಿನ ಆತನ ಸ್ನೇಹಿತನ ಸಂಪರ್ಕ ಸಾಧ್ಯವಾಯ್ತು.
ಆತ ತಾನೂ ಈಜುಕೊಂಡು ವಿಮಾನ ನಿಲ್ದಾಣಕ್ಕೆ ಬಂದು ಬೆಂಗಳೂರು ತಲುಪಿದ್ದೇನೆಂದು ತಿಳಿಸಿದ. ಆದರೆ, ಮಗನ ಜತೆ ಸಂಪರ್ಕ ಸಾಧ್ಯ ಆಗಿಲ್ಲವೆಂದು ತಾಯಿ ಗಾಯಿತ್ರಿ ತಿಳಿಸಿದ್ದಾರೆ.