

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ತಿಳಿಸಿದ್ದಾರೆ.
ನ.8 ರಂದು ಸುಷ್ಮಾ ಸ್ವರಾಜ್ ಅವರು ಇಸ್ಲಾಮಾಬಾದ್ ಗೆ ಪ್ರಯಾಣಿಸಲಿದ್ದು ವಾಪಸ್ಸಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ. ಸುಷ್ಮಾ ಸ್ವರಾಜ್ ಭಾರತಕ್ಕೆ ವಾಪಸ್ಸಾದ ಬಳಿಕ ಪಾಕಿಸ್ತಾನ- ಭಾರತದ ದ್ವಿಪಕ್ಷೀಯ ಮಾತುಕತೆ ಬಗ್ಗೆ ಸಂಸತ್ ಗೆ ವಿಸ್ತೃತ ಮಾಹಿತಿ ನೀಡಲಿದ್ದಾರೆ ಎಂದು ರೂಡಿ ಹೇಳಿದ್ದಾರೆ.
ನ.7 ರಂದು ನವದೆಹಲಿಯಲ್ಲಿ ಪಾಕಿಸ್ತಾನ- ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್.ಎಸ್.ಎ) ಮಟ್ಟದ ಮಾತುಕತೆ ನಡೆದಿತ್ತು. ಸಭೆಯಲ್ಲಿ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧವನ್ನು ಮುಂದುವರೆಸಲು ತೀರ್ಮಾನಿಸಲಾಗಿತ್ತು. ಇಸ್ಲಾಮಾಬಾದ್ ಗೆ ತೆರಳಲಿರುವ ಸುಷ್ಮಾ ಸ್ವರಾಜ್ "ಹಾರ್ಟ್ ಏಷ್ಯಾದ" ಭದ್ರತಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ.