ಪ್ರಗತಿಯಲ್ಲಿ ನನ್ನದೂ ಪಾಲಿರಲಿ ಎಂದು ಪ್ರತಿಯೊಬ್ಬ ಪ್ರಜೆ ಅಂದುಕೊಳ್ಳಬೇಕು. ಇದನ್ನು ಸಾಧ್ಯವಾಗಿಸಬೇಕಾದ ಹಲವಾರು ಮಹತ್ವದ ಮಸೂದೆಗಳು ಸಂಸತ್‍ನಲ್ಲಿವೆ. ಎಲ್ಲರೂ ಜಿಎಸ್‍ಟಿ ಬಗ್ಗೆ ಮಾತಾಡುತ್ತಾರೆ. ಆದರೆ, ಬಡವರ ಕುರಿತಾದ ಹಲವು ಮಸೂದೆಗಳು ಬಾಕಿ ಇವೆ. ಬಡ ಕೆಲಸಗಾರರು ಬೋನಸ್ ಪಡೆಯಲು ಸದ್ಯದ ರು.3,500 ಮಿತಿಯನ್ನು ರು.7,000ಕ್ಕೆ ಏರಿಸುವುದೂ ಅದರಲ್ಲಿ ಸೇರಿದೆ.