

ನವದೆಹಲಿ: ಬಿಡುಗಡೆಯಾಗಲಿರುವ ನಿರ್ಭಯಾ ಪ್ರಕರಣದ ಬಾಲಾಪರಾಧಿಯನ್ನು ಶನಿವಾರ ವೀಕ್ಷಣಾಲಯದಿಂದ ನಿಗೂಢ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾನುವಾರ ಅಲ್ಲಿಂ
ದಲೇ ಆತ ಬಿಡುಗಡೆಯಾಗಲಿದ್ದಾನೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ, ಈತನ ಬಿಡುಗಡೆಗೆ ತಡೆ ಕೋರಿ ದೆಹಲಿ ಮಹಿಳಾ ಆಯೋಗವು ಶನಿವಾರ ರಾತ್ರೋರಾತ್ರಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದೆ.
ಜತೆಗೆ, ನಿರ್ಭಯಾ ಹೆತ್ತವರು ಬಾಲಾಪ ರಾಧಿಯನ್ನಿಟ್ಟಿದ್ದ ವೀಕ್ಷಣಾಲಯದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಒಂದು ಗಂಟೆಯ ಬಳಿಕ ಬಿಡುಗಡೆ ಮಾಡಿದ್ದಾರೆ. ಮೂರು ವರ್ಷಗಳ ವೀಕ್ಷಣಾಲಯ ವಾಸಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರ-ವಾರಷ್ಟೇ ಕೋರ್ಟ್ ಆತನ ಬಿಡುಗಡೆಗೆ ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ನಿಗದಿಯಂತೆ ಭಾನುವಾರ ಬಿಡುಗಡೆಯಾಗಬೇಕಿತ್ತು.
ಆದರೆ, ಆತನ ಜೀವಕ್ಕೆ ಅಪಾಯವಿದೆ ಎಂಬ ಹಿನ್ನೆಲೆಯಲ್ಲಿ ಆತನ ಮೇಲೆ ಹಲವು ಏಜೆನ್ಸಿಗಳು ಕಣ್ಣಿಟ್ಟಿದ್ದವು. ಇದೀಗ 20 ವರ್ಷ ಪ್ರಾಯದ ಆತ ವೀಕ್ಷಣಾಲಯದ ಅವಧಿಯಲ್ಲಿ ಟೈಲರಿಂಗ್ ವೃತ್ತಿ ತರಬೇತಿ ಪಡೆದಿದ್ದು, ಬಿಡುಗಡೆ ವೇಳೆ ಕಾನೂನು ರೀತಿ ಸುಮಾರು 10 ಸಾವಿರ ರು. ನಗದು ಹಾಗೂ ಮುಂದಿನ ಜೀವನೋಪಾಯಕ್ಕಾಗಿ ಆತನಿಗೆ ಹೊಲಿಗೆ ಯಂತ್ರವ ನ್ನು ನೀಡಲಾಗುವುದು ಎಂದು ದೆಹಲಿ ಸರ್ಕಾ-ರದ ಸಲ್ಲಿಸಿರುವ ಆತನ ಪುನರ್ವಸತಿ ಯೋಜನೆಯಲ್ಲಿ ವಿವರಿಸಲಾಗಿದೆ.