

ಭೋಪಾಲ್: ವ್ಯಾಪಂ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ಲಕ್ಷ್ಮಿಕಾಂತ್ ಶರ್ಮಾ ಗೆ ಮಧ್ಯಪ್ರದೇಶ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿದ್ದ ಹಿನ್ನೆಲೆಯಲ್ಲಿ ಡಿ.20 ರಂದು ಅವರನ್ನು ಬಿಡುಗಡೆ ಮಾಡಲಾಗಿದೆ.
ಮಧ್ಯಪ್ರದೇಶದ ಜಬಲ್ ಪುರ ಪೀಠದಲ್ಲಿ ಜಾಮೀನು ಕೋರಿ ಮಾಜಿ ಸಚಿವ ಲಕ್ಷ್ಮಿಕಾಂತ್ ಶರ್ಮ ಅರ್ಜಿ ಸಲ್ಲಿಸಿದ್ದರು. ಡಿ.19 ರಂದು ಶರ್ಮಾ ಗೆ ಜಾಮೀನು ಮಂಜೂರಾಗಿತ್ತು. ಮಧ್ಯಪ್ರದೇಶ ವೃತ್ತಿ ಪರೀಕ್ಷಾ ಮಂಡಳಿ (ಎಂಪಿಪಿಇಬಿ) ಹಗರಣ (ವ್ಯಾಪಂ ಹಗರಣ)ದಲ್ಲಿ ಶರ್ಮಾ ಪ್ರಮುಖ ಆರೋಪಿಯಾಗಿದ್ದರು. ವಿಶೇಷ ಕಾರ್ಯಪಡೆಯ ಪೊಲೀಸರು 2014 ರ ಜೂನ್ 16 ರಂದು ಹಗರಣದ ಆರೋಪಿ ಲಕ್ಷ್ಮಿಕಾಂತ್ ಶರ್ಮಾ ಅವರನ್ನು ಬಂಧಿಸಿದ್ದರು. ವ್ಯಾಪಂ ಹಗರಣದ ಮತ್ತೊಬ್ಬ ಆರೋಪಿ ಮಾಜಿ ಅಧಿಕಾರಿಗೆ ಡಿ.19 ರಂದು ಬಿಡುಗಡೆ ಮಾಡಲಾಗಿತ್ತು.