3 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ

ಮೂರು ಲಕ್ಷ ಲಂಚ ಪಡೆಯುತ್ತಿದ್ದ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಭ್ರಷ್ಟಚಾರ ನಿಗ್ರಹ ದಳ ಮಂಗಳವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮೂರು ಲಕ್ಷ ಲಂಚ ಪಡೆಯುತ್ತಿದ್ದ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ರನ್ನು ಭ್ರಷ್ಟಚಾರ ನಿಗ್ರಹ ದಳ ಮಂಗಳವಾರ ಬಂಧಿಸಿದೆ.
ಮುಂಬೈನ ಸುಬರ್ಬನ್ ನಲ್ಲಿರುವ ಎಂಎಚ್ ಬಿ ಕಾಲೋನಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಸುಭಾಷ್ ಚಹ್ವಾಣ್(58) ಬಂಧಿತ ಆರೋಪಿ.
ಅಕ್ರಮವಾಗಿ ಕಟ್ಟಡ ನಿರ್ಮಾಣ ಮತ್ತು ಅಲ್ಲಿರುವ ಕಾರ್ಮಿಕರ ವಿರುದ್ಧ ಕ್ರಮಕೈಗೊಳ್ಳದೇ ಇರುವುದಕ್ಕೆ ನಾಲ್ಕು ಲಕ್ಷ ನೀಡುವಂತೆ ಸುಭಾಷ್ ದೂರುದಾರರ ಬಳಿ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ದೂರುದಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇರೆಗೆ ಸುಭಾಷ್ ಅವರನ್ನು ಲಂಚ ಪಡೆಯುತ್ತಿದ್ದ ವೇಳೆ ಬಂಧಿಸಲಾಗಿದೆ. ಸುಭಾಷ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com