ಜಮ್ಮುವಿನಲ್ಲಿ ಗುಂಡಿನ ಮೊರೆತ: ಯೋಧರ ಗುಂಡಿಗೆ 2 ಉಗ್ರರು ಬಲಿ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಯೋಧರ ಗುಂಡಿಗೆ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ...
ಜಮ್ಮುವಿನಲ್ಲಿ ಗುಂಡಿನ ಮೊರೆತ: ಯೋಧರ ಗುಂಡಿಗೆ 2 ಉಗ್ರರು ಬಲಿ
ಜಮ್ಮುವಿನಲ್ಲಿ ಗುಂಡಿನ ಮೊರೆತ: ಯೋಧರ ಗುಂಡಿಗೆ 2 ಉಗ್ರರು ಬಲಿ
Updated on: 

ಜಮ್ಮು: ಜಮ್ಮು ಮತ್ತು ಕಾಶ್ಮೀರದಪುಲ್ವಾಮಾದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಯೋಧರ ಗುಂಡಿಗೆಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಸಾವನ್ನಪ್ಪಿರುವ ಉಗ್ರರುಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರಾಗಿದ್ದು, ಹಲವು ದಿನಗಳಿಂದಲೂ ಈ ಉಗ್ರರು ಜಮ್ಮುಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಅಡಗಿ ಕುಳಿತಿರುವುದಾಗಿ ತಿಳಿದುಬಂದಿತ್ತು. ಹೀಗಾಗಿ ಇಂದು ಕಾರ್ಯಾಚರಣೆಗಿಳಿದಿದ್ದಭಾರತೀಯ ಭದ್ರತಾ ಪಡೆಯು ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಯೋಧರಗುಂಡಿಗೆ ಹತರಾದ ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಎಂದು ಹೇಳಲಾಗುತ್ತಿದ್ದು,ಇಬ್ಬರಲ್ಲಿ ಓರ್ವನನ್ನು ಮನ್ಜೂರ್ ಭಟ್ ಎಂದು ಗುರ್ತಿಸಲಾಗಿದೆ. ಸಾವನ್ನಪ್ಪಿದ ಉಗ್ರರ ಬಳಿಯಿದ್ದಎಕೆ47, 4 ನಿಯತಕಾಲಿಕೆಗಳು ಹಾಗೂ ಇನ್ನಿತರೆ ಶಸ್ತ್ರಾಸ್ತ್ರಗಳನ್ನು ಅಧಿಕಾರಿಗಳುವಶಪಡಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com