ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಬಂಧನ

ಇಕ್ಬಾಲ್ ಕಸ್ಕರ್(ಸಾಂದರ್ಭಿಕ ಚಿತ್ರ)
ಇಕ್ಬಾಲ್ ಕಸ್ಕರ್(ಸಾಂದರ್ಭಿಕ ಚಿತ್ರ)

ಮುಂಬೈ: ರಿಯಲ್ ಎಸ್ಟೇಟ್ ಎಜೆಂಟ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ನನ್ನು ಪೊಲೀಸರು ಬಂಧಿಸಲಾಗಿದೆ.

ಹಲ್ಲೆ ಆರೋಪದ ಮೇಲೆ ಮುಂಬೈ ಪೊಲೀಸರು ಇಂದು ಸಂಜೆ ಇಕ್ಬಾಲ್ ಕಸ್ಕರ್ ಸೇರಿದಂತೆ ಮತ್ತಿಬ್ಬರನ್ನು ಬಂಧಿಸಿದ್ದಾರೆ.

ಇಕ್ಬಾಲ್ ಕಸ್ಕರ್ ಕಳೆದ ಶುಕ್ರವಾರ ಮೂರು ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ ಹಣ ನೀಡದ ಹಿನ್ನೆಲೆಯಲ್ಲಿ ನನ್ನ ಮೇಲೆ ಕಸ್ಕರ್ ಹಲ್ಲೆ ಮಾಡಿದ್ದಾನೆ ಎಂದು ಮುಂಬೈನ ಬೈಕುಲಾ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾಗಿದ್ದ ರಿಯಲ್ ಎಸ್ಟೇಟ್ ಎಜೆಂಟ್ ಸಲೀಂ ಶೇಕ್ ಎಂಬಾತ ದೂರು ದಾಖಲಿಸಿದ್ದ.

ಈ ಸಂಬಂಧ ಇಕ್ಬಾಲ್ ಕಸ್ಕರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com