ದೆಹಲಿಯ 16 ವರ್ಷದ ರಾಜಕೀಯ ಕೊಳೆ ತೊಡೆದು ಹಾಕುವೆ: ಮೋದಿ

ಫೆಬ್ರವರಿ 7 ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕೊನೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಫೆಬ್ರವರಿ 7 ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕೊನೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 16 ವರ್ಷಗಳಲ್ಲಿ ದೆಹಲಿಯಲ್ಲಿ ಸರಕಾರ ರಚಿಸಿರುವವರು ಗುಡ್ಡೆ ಹಾಕಿರುವ ರಾಜಕೀಯ ಕೊಳೆಯನ್ನು ಬಿಜೆಪಿಯು ಸಂಪೂರ್ಣವಾಗಿ ನಿರ್ನಾಮ ಮಾಡುವೆ ಎಂದು ಹೇಳಿದರು.

ದಕ್ಷಿಣ ದೆಹಲಿಯಲ್ಲಿ ಯಲ್ಲಿ ಏರ್ಪಡಿಸಿದ್ದ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಬಿಜೆಪಿಯೇ ಸರಕಾರ ರಚಿಸಲಿದೆ; ಆ ಬಗ್ಗೆ ಯಾರಿಗೂ ಯಾವುದೇ ಸಂದೇಹ ಬೇಡ ಎಂದರು. ಅಲ್ಲದೆ ದೆಹಲಿ ದೇಶದ ಪ್ರಮುಖ ಕೇಂದ್ರ ಸ್ಥಾನವಾಗಿದ್ದು, ದೆಹಲಿಯಲ್ಲಿ ಅಸ್ಥಿರವಾದರೆ ಇಡೀ ದೇಶಕ್ಕೇ ಅಪಾಯ ಎಂದು ಎಚ್ಚರಿಸಿದರು. ನನ್ನ ರಾಜಕಾರಣವು ಅಭಿವೃದ್ಧಿಯನ್ನು ಗುರಿ ಇರಿಸಿಕೊಂಡದ್ದು. ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡುವುದು ಕಡಿಮೆ, ಆದರೆ ಆ ಬಗ್ಗೆ ಕೆಲಸ ಮಾಡುವುದು ಹೆಚ್ಚು ಎಂದು ಹೇಳಿದರು.

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿ ಮಹಾನಗರಿಗೆ ಹೊಸ ಆಯಾಮ ಕೊಡಲಾಗುತ್ತದೆ ಎಂಬ ಭರವಸೆಯನ್ನು ನೀಡಿದ ಮೋದಿ, ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ವಾಸಯೋಗ್ಯಕ್ಕೆ ಉತ್ತಮ ಮನೆಗಳನ್ನು ನಿರ್ಮಿಸಿಕೊಡುವುದು ಬಿಜೆಪಿಯ ಪ್ರಮುಖ ಗುರಿಯಾಗಿದೆ. ಪ್ರತಿಯೋರ್ವ ಕೊಳೆಗೇರಿ ವಾಸಿಗೆ ಮನೆ ಇರುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಬಿಜೆಪಿ ವಹಿಸಲಿದೆ ಎಂದು ಮೋದಿ ಹೇಳಿದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com