ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on: 

ನವದೆಹಲಿ: ದೆಹಲಿಯ ಅಭಿವೃದ್ಧಿಗಾಗಿ ಮತ್ತು ದೇಶದ ಮಹತ್ತರ ಅವಶ್ಯಕತೆಗಳಿಗಾಗಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆಹಲಿ ಮತದಾರರಿಗೆ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಗೆ ಫೆಬ್ರವರಿ 7 ರಂದು ಮತದಾನ ನಡೆಯಲಿದ್ದು, ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ ಕೇಜ್ರಿವಾಲ್‌ ಅವರಿಗೆ ಮತ ಹಾಕುವಂತೆ ತಮ್ಮ ಟ್ವಿಟರ್‌ ಸಂದೇಶದ ಮೂಲಕ ಮತದಾರರಲ್ಲಿ ಬ್ಯಾನರ್ಜಿ ನಿವೇದಿಸಿಕೊಂಡಿದ್ದಾರೆ.

ಬಹುಕೋಟಿ ಶಾರದಾ ಚಿಟ್‌ ಹಗರಣದಲ್ಲಿ ಮಮತಾ ಬ್ಯಾನರ್ಜಿ ಅವರ ಕೆಲವು ನಿಕಟವರ್ತಿಗಳು, ಸಂಪುಟ ಸಚಿವರು ಈಗಾಗಲೇ ಜೈಲುಪಾಲಾಗಿದ್ದು ಮಮತಾ ವರ್ಚಸ್ಸಿಗೆ ಕುಂದುಂಟಾಗಿತ್ತು.

ಕೇಂದ್ರ ಸರ್ಕಾರದ ವಿರುದ್ಧ  ಕುದಿಯುತ್ತಿದ್ದ ಬ್ಯಾನರ್ಜಿಗೆ ಇದೀಗ ದೆಹಲಿ ಚುನಾವಣೆ ಅವಕಾಶ ಹೊದಗಿಸಿದ್ದು, ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಅವರು ಆಪ್ ಗೆ ಮತ ನೀಡುವಂತೆ ಮತದಾರರಲ್ಲಿ ವಿನಂತಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com