

ಪಾಟ್ನಾ: ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಯಾವುದೇ ಪ್ರಮುಖ ನಿರ್ಧಾರ ಹಾಗೂ ಯೋಜನೆಗಳನ್ನು ಜಾರಿಗೆ ತರುವಂತಿಲ್ಲ ಎಂದು ಪಟನಾ ಹೈಕೋರ್ಟ್ ಸೂಚನೆ ನೀಡಿದೆ.
ರಾಜಕೀಯ ಬಿಕ್ಕಟ್ಟು ಬಹುಮತ ಸಾಬೀತುಪಡಿಸುವ ಹಂತದಲ್ಲಿರುವುದರಿಂದ ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಏನಿದ್ದರೂ ದೈನಂದಿನ ವಿಷಯಗಳ ಮೇಲೆ ಮಾತ್ರ ಕೆಲಸ ಮಾಡಿ ಎಂದು ಸಿಎಂ ಮಾಂಝಿಗೆ ಹೈಕೋರ್ಟ್ ಸೂಚಿಸಿದೆ.
ರಾಷ್ಟ್ರಪತಿ ಆಳ್ವಿಕೆ ಉದ್ದೇಶ ಅಲ್ಲ: ನನಗೆ ವಿಶ್ವಾಸ ಮತ ಸಾಬೀತುಪಡಿಸುವ ವಿಶ್ವಾಸ ಇದೆ. ರಾಷ್ಟ್ರಪತಿ ಆಳ್ವಿಕೆ ನನ್ನ ಉದ್ದೇಶ ಅಲ್ಲ. ನಾನು ದೆಹಲಿಗೆ ಬಂದಿರುವುದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲೇ ಹೊರತು ಬಿಜೆಪಿ ಮುಖಂಡರನ್ನು ಮಾತನಾಡಿಸಲು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾ ಭೇಟಿ: ದೆಹಲಿ ಭೇಟಿ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜತೆ ಮಾತುಕತೆ ನಡೆಸುವ ತಂತ್ರವಿದೆ ಎಂದು ಹೇಳಲಾಗುತ್ತಿದ್ದು, ಫೆ. 20ರಂದು ಬಹುಮತ ಸಾಬೀತಿಗೆ ಬೆಂಬಲಿಸುವಂತೆ ಕೇಳಲಿದ್ದಾರೆ.