

ಇಂಫಾಲ್: ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಮೂವರು ಪೊಲೀಸರು ಸೇರಿ ನಾಲ್ವರು ನಾಗರಿಕರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಮಣಿಪುರದ ಮಾರುಕಟ್ಟೆಯಲ್ಲಿ ನಡೆಸಿದೆ.
ಮಣಿಪುರದ ಸಮು ಮಖೋಂಗ್ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ತಪಾಸಣೆ ನಡೆಸಿದಾಗ, ಬಾಂಬ್ ಇರುವಂತಹ ಬ್ಯಾಗ್‌ವೊಂದು ಪತ್ತೆಯಾಗಿದೆ.
ಅದನ್ನು ತೆಗೆದ ಪೇದೆ ಎಸೆಯಲು ಮುಂದಾಗಿದ್ದಾರೆ, ಆ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಪೊಲೀಸರು ಸೇರಿದಂತೆ ಮೂವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.