ಕಾರ್ಪೋರೇಟ್ ಬೇಹುಗಾರಿಕೆ ಪ್ರಕರಣ ಮತ್ತೊಬ್ಬ ಆರೋಪಿ ಬಂಧನ

ಕಾರ್ಪೋರೇಟ್ ಬೇಹುಗಾರಿಕೆ ಮತ್ತು ಗೌಪ್ಯ ಸರ್ಕಾರಿ ದಾಖಲೆಗಳ ಮಾಹಿತಿ ಸೋರಿಕೆಯ ಸಂಶಯದಲ್ಲಿ ಪೆಟ್ರೋಲಿಯಂ ಸಚಿವಾಲಯದ ಮತ್ತೋರ್ವ ನೌಕರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ...
ಬಂಧಿತ ಆರೋಪಿ ಲೋಕೇಶ್
ಬಂಧಿತ ಆರೋಪಿ ಲೋಕೇಶ್
Updated on

ನವದೆಹಲಿ: ಕಾರ್ಪೋರೇಟ್ ಬೇಹುಗಾರಿಕೆ ಮತ್ತು ಗೌಪ್ಯ ಸರ್ಕಾರಿ ದಾಖಲೆಗಳ ಮಾಹಿತಿ ಸೋರಿಕೆಯ ಸಂಶಯದಲ್ಲಿ ಪೆಟ್ರೋಲಿಯಂ ಸಚಿವಾಲಯದ ಮತ್ತೋರ್ವ ನೌಕರರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಶಾಸ್ತ್ರಿ ಭವನದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್(30) ಎಂಬಾತನ ಮೇಲೆ ಹಲವು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ಲೋಕೇಶ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಅಪರಾಧಿ ತನಿಖಾ ವಿಭಾದ ತಂಡ, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಸ್ತ್ರೀ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್ ಎಂಬಾತನು ಕಾಣೆಯಾಗಿರುವುದು ಕಂಡು ಬಂದಿದೆ. ಲೋಕೇಶ್ ಎಂಬಾತ ಇತರ ಆರೋಪಿಗಳೊಂದಿಗೆ ಶಾಮಿಲಾಗಿರುವ ಬಗ್ಗೆ ಹಲವು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಲೋಕೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com