ಮಗಳನ್ನು ಅತ್ಯಾಚಾರವೆಸಗಿದ್ದ ತಂದೆ ಆತ್ಮಹತ್ಯೆಗೆ ಶರಣು

10 ವರ್ಷದ ಮಗಳನ್ನು ಅತ್ಯಾಚಾರವೆಸಗಿದ್ದ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ...
ಮಗಳನ್ನು ಅತ್ಯಾಚಾರವೆಸಗಿದ್ದ ತಂದೆ ಆತ್ಮಹತ್ಯೆಗೆ ಶರಣು
Updated on

ಔರಂಗಬಾದ್: 10 ವರ್ಷದ ಮಗಳನ್ನು ಅತ್ಯಾಚಾರವೆಸಗಿದ್ದ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಔರಂಗಬಾದ್‌ನಲ್ಲಿ ನಡೆದಿದೆ.

45 ವರ್ಷದ ವ್ಯಕ್ತಿಯೊಬ್ಬ 10 ವರ್ಷದ ಮಗಳನ್ನು ಶಾಲೆಯಿಂದ ಕರೆ ತರಬೇಕಾದರೆ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದನು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಕಾಣೆಯಾಗಿದ್ದನು. ಒಂದು ದಿನ ಆರೋಪಿ ಮಗನಿಗೆ ಕರೆ ಮಾಡಿ, ನಾನು ಇನ್ನು ಹೆಚ್ಚು ದಿನ ಉಳಿದಿರುವುದಿಲ್ಲ. ನೋಡಬೇಕಿನಿಸಿದರೆ ಬೇಗ ಬಂದು ನೋಡು ಎಂದು ತಿಳಿಸಿದ್ದನು. ಮಗನು ಬರುವಷ್ಟರಲ್ಲಿ ಆತ ವಿಷ ಸೇವಿಸಿ ಅರೆಜೀವವಾಗಿದ್ದನು.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಆತ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಗೆ ಇಬ್ಬರು ಗಂಡುಮಕ್ಕಳು ಹಾಗೂ ಎರಡನೇ ಪತ್ನಿಗೆ ಒಂದು ಹೆಣ್ಣು ಮಗು ಇತ್ತು. ಎರಡನೇ ಪತ್ನಿಯೊಂದಿಗೆ ಆತ ವಾಸಗಿದ್ದ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com