

ಜಮೈ: ಚಲಿಸುತ್ತಿದ್ದ ರೈಲಿನ 4 ಸ್ಲೀಪರ್ ಕೋಚ್‌ಗಳಲ್ಲಿ ದರೋಡೆಕೋರರ ಗುಂಪೊಂದು, ಪ್ರಯಾಣಿಕರಿಂದ ಬಾರಿ ಪ್ರಮಾಣದ ನಗ ನಾಣ್ಯಗಳನ್ನು ಲೂಟಿ ಮಾಡಿ ಪರಾರಿಯಾದ ಘಟನೆ ಚಾಪ್ರ-ಟಾಟಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಕಳೆದ ಮಧ್ಯ ರಾತ್ರಿ ಚಾಪ್ರ-ಟಾಟಾ ಎಕ್ಸ್‌ಪ್ರೆಸ್ ಬಿಹಾರದ ದೂದ್‌ನಗರ ಬಳಿ ಸಮೀಪಿಸುತ್ತಿದ್ದಂತೆ ಶಸಸ್ತ್ರಧಾರಿಗಳ ಗುಂಪೊಂದು ಚಲಿಸುತ್ತಿದ್ದ ರೈಲಿಗೆ ಲಗ್ಗೆ ಹಾಕಿತು. ನಾಲ್ಕು ಸ್ಪೀಪರ್ ಕೋಚ್‌ಗಳಿಗೆ ನುಗ್ಗಿದ ದರೋಡೆ ಗುಂಪು ಪ್ರಯಾಣಿಕರ ಬಳಿಯಿದ್ದ ನಗ, ನಾಣ್ಯಗಳು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದೆ.
ಘಟನೆಯ ಬಳಿಕ ದೂದ್‌ನಗರ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಪ್ರಯಾಣಿಕರು, ಈ ಕುರಿತು ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 10 ದಿನಗಳ ಹಿಂದಷ್ಟೇ ಚಲಿಸುತ್ತಿದ್ ರೈಲಿನಲ್ಲಿ ದರೋಡೆ ಘಟನೆ ನಡೆದಿತ್ತು. ದರೋಡೆ ಘಟನೆ ಬಳಿಕವೂ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಭದ್ರತೆಗಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು.
ಕಳೆದ ಮಧ್ಯರಾತ್ರಿ ಸುಮಾರು 20 ಮಂದಿಯ ಶಸ್ತ್ರಸ್ತ್ರಾಗಳನ್ನು ಹೊಂದಿದ್ದ, ದರೋಡೆಕೋರರ ಗುಂಪೊಂದು ಪ್ರಯಾಣಿಕರಿಗೆ ಪ್ರಾಣಬೆದರಿಕೆ ಹಾಕಿ, ನಗದು, ಚಿನ್ನಾಭರಣಗಳು ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದೆ.
ಈ ಕುರಿತು ಪಕರಣ ದಾಖಲಿಸಿದ್ದು, ದರೋಡೆಕೋರರ ಗುಂಪನ್ನು ಶೀಘ್ರವೇ ಪತ್ತೆಹಚ್ಚುವುದಾಗಿ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಭರವಸೆ ನೀಡಿದರು.