24 ವರ್ಷ ರಜೆಯಲ್ಲಿದ್ದ ಸರ್ಕಾರಿ ನೌಕರ ಕೊನೆಗೂ ವಜಾ!

1990ರಿಂದ ಧೀರ್ಘ ರಜೆಯಲ್ಲಿದ್ದ ಕೇಂದ್ರೀಯ ಲೋಕೋಪಯೋಗಿ ಇಲಾಖೆಯ ಎ.ಕೆ.ವರ್ಮಾ...
1990ರಿಂದ ಧೀರ್ಘ ರಜೆಯಲ್ಲಿದ್ದ ಎ.ಕೆ.ವರ್ಮಾ ವಜಾ
1990ರಿಂದ ಧೀರ್ಘ ರಜೆಯಲ್ಲಿದ್ದ ಎ.ಕೆ.ವರ್ಮಾ ವಜಾ

ನವದೆಹಲಿ: ಬರೋಬ್ಬರಿ 24 ವರ್ಷಗಳ ರಜೆಯಲ್ಲಿ ತೆರಳಿದ್ದ ಸರ್ಕಾರಿ ನೌಕರನೊಬ್ಬ ಮೋದಿ ಆಡಳಿತದ ಗಾಳಕ್ಕೆ ಸಿಕ್ಕಿಬಿದ್ದಿದ್ದಾನೆ!

24 ವರ್ಷಗಳ ಹಿಂದೆ ರಜೆಯಲ್ಲಿ ತೆರಳಿ ನಂತರ ಮರಳಿ ಬರದೇ ಇದ್ದ ನೌಕರರನ್ನು ಗುರುವಾರ ಕೆಲಸದಿಂದ ವಜಾ ಮಾಡಲಾಗಿದೆ.

1990ರಿಂದ ಧೀರ್ಘ ರಜೆಯಲ್ಲಿದ್ದ ಕೇಂದ್ರೀಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಎ.ಕೆ.ವರ್ಮಾ ಈಗ ಕೆಲಸ ಕಳೆದುಕೊಂಡಿದ್ದಾರೆ.

ರಜೆಯಲ್ಲಿ ತೆರಳಿದ್ದ ವರ್ಮಾ ಅವರು ರಜೆ ವಿಸ್ತರಿಸುವಂತೆ ಕೇಳಿಕೊಂಡರೂ ನಿರಾಕರಿಸಿದ್ದ ಅಧಿಕಾರಿಗಳು ಅವರಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ವರ್ಮಾ ವಾಪಸ್ ಬಂದೇ ಇರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com