ಚೆನ್ನೈನಲ್ಲಿ ಇಬ್ಬರ ಬಂಧನ: 7 ಕೆಜಿ ಚಿನ್ನ ವಶ

ಚಿನ್ನ
ಚಿನ್ನ

ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು ಅವರಿಂದ 7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದು, ನಂತರ ಅವರನ್ನು ಪೋಲೀಸರ ವಶಕ್ಕೆ ನೀಡಲಾಗಿದೆ.

ಸಿಂಗಪೂರ್‌ನಿಂದ ತಮಿಳುನಾಡಿಗೆ ಬಂದಿದ್ದ ತಮಿಳುನಾಡು ಮೂಲದ ಸಯ್ಯದ್ ಅಬುತಾಹಿರ್ ಮತ್ತು ಆಜಾ ಅಲ್ಲಾವುದ್ದೀನ್ ಎಂಬುವರನ್ನು ಪೊಲೀಸರ ಬಂಧಿಸಿದ್ದಾರೆ.

ಈ ಇಬ್ಬರು ತಮ್ಮ ಕೈ ಚೀಲಗಳಲ್ಲಿ 7 ಕೆಜಿ ಬಂಗಾರವನ್ನು ಬಚ್ಚಿಟ್ಟುಕೊಂಡಿದ್ದರು. ಪೊಲೀಸರು ವಶಪಡಿಸಿಕೊಂಡಿರುವ ಚಿನ್ನದ ಬೆಲೆ ಸುಮಾರು ಎರಡೂವರೆ ಕೋಟಿ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com