ಕಾಶ್ಮೀರದಲ್ಲಿ ಮುಂದುವರಿದ ಅತಂತ್ರ ಸ್ಥಿತಿ: ಎನ್‌ಸಿ ಬೆಂಬಲ ತಿರಸ್ಕರಿಸಿದ ಪಿಡಿಪಿ

ಮೆಹಬೂಬಾ  ಮುಫ್ತಿ
ಮೆಹಬೂಬಾ ಮುಫ್ತಿ
Updated on: 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಅತಂತ್ರ ಸ್ಥಿತಿ ಮುಂದುವರಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಪಿಡಿಪಿ, ಎನ್‌ಸಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬುಧವಾರ ನಿರಾಕರಿಸಿದೆ.

ಕಣಿವೆ ರಾಜ್ಯದ ಜನತೆ ಎನ್‌ಸಿ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಹೀಗಾಗಿ ಸರ್ಕಾರ ರಚನೆ ಕುರಿತು ಅವರು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪಿಡಿಪಿ ಮುಖ್ಯ ವಕ್ತಾರ ನಯೀಮ್ ಅಖ್ತರ್ ಅವರು ಹೇಳಿದ್ದಾರೆ.

ಪಿಡಿಪಿಗೆ ಬೆಂಬಲ ಘೋಷಿಸಿ ಎನ್‌ಸಿ ಕಾರ್ಯಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ನಿನ್ನೆ ರಾಜ್ಯಪಾಲ ಎನ್.ಎನ್.ವೊಹ್ರಾ ಅವರಿಗೆ ಬೆಂಬಲ ಪತ್ರ ಕಳುಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅಖ್ತರ್, ಅಧಿಕಾರ ಹಿಡಿಯುವುದು ನಮ್ಮ ಉದ್ದೇಶ ಅಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ.

ಇನ್ನು ಸರ್ಕಾರ ರಚನೆ ಸಂಬಂಧ ಬಿಜೆಪಿಯೊಂದಿಗೆ ಮಾತುಕತೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಖ್ತರ್ ಅವರು, ಅಧಿಕೃತ ಮಾತುಕತೆ ಇನ್ನು ನಡೆದಿಲ್ಲ. ಆದರೆ ಔಪಚಾರಿಕ ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com