

ಅಮೆರಿಕಾ: ಹೊಟ್ಟೆ ಹಸಿವು ತಾಳಲಾರದೆ ಕಳ್ಳನೊಬ್ಬ ರೆಸ್ಟೋರೆಂಟ್ ನುಗ್ಗಿ ಬರೋಬ್ಬರಿ ಸುಮಾರು 2.4 ಲಕ್ಷ ರುಪಾಯಿ ಮೊತ್ತದ ಚಿಕನ್ ಖಾದ್ಯಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.
ತನ್ನ ಹಸಿವು ನೀಗಿಗೆ ಕಳ್ಳನೊಬ್ಬ ರೆಸ್ಟೋರೆಂಟ್ ಒಂದಕ್ಕೆ ನುಗ್ಗಿದ್ದು, ಚಿಕನ್ ಫ್ರೈ, ಡ್ರೈ, ಸೇರಿದಂತೆ ವಿವಿಧ ರುಚಿಕರ ಖಾದ್ಯಗಳನ್ನು ಕದ್ದಿದ್ದಾನಲ್ಲದೇ ಖಾಲಿ ಕ್ಯಾಶ್ ರಿಜಿಸ್ಟರ್ ಒಂದನ್ನೂ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾನೆ.
ಈ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಬಹುಶಃ ಒಂದು ವಾರದ ಪಾರ್ಟಿಗಾಗಿ ಇದನ್ನೆಲ್ಲಾ ಕದ್ದಿರಬೇಕು ಎಂದು ಅಲ್ಲಿನ ಪೊಲಿಸರು ತಮಾಷೆಯಾಡಿದ್ದಾರಂತೆ.