ಮೆಟ್ರೋ ರೈಲಿನಲ್ಲಿ ಪ್ರಯಾಣಿಕನ ಕಪಾಳಕ್ಕೆ ಹೊಡೆದ ಎಂಕೆ ಸ್ಟಾಲಿನ್

ಚೆನ್ನೈ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದ್ರಾವಿಡ ಮುನ್ನೇಟ್ಟ ಕಳಗಂ (ಡಿಎಂಕೆ) ಖಜಾಂಜಿ ಎಂಕೆ ಸ್ಟಾಲಿನ್ ಸಹ ಪ್ರಯಾಣಿಕರೊಬ್ಬರಿಗೆ...
ಸ್ಟಾಲಿನ್ ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ
ಸ್ಟಾಲಿನ್ ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ
Updated on: 

ಚೆನ್ನೈ: ಚೆನ್ನೈ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದ್ರಾವಿಡ ಮುನ್ನೇಟ್ಟ ಕಳಗಂ (ಡಿಎಂಕೆ) ಪಕ್ಷದ ಖಜಾಂಜಿ ಎಂಕೆ ಸ್ಟಾಲಿನ್ ಸಹ ಪ್ರಯಾಣಿಕರೊಬ್ಬರ ಕಪಾಳಕ್ಕೆ ಹೊಡೆದಿರುವ ಘಟನೆ ವರದಿಯಾಗಿದೆ.

ಸ್ಟಾಲಿನ್ ಬಳಿ ನಿಂತಿದ್ದ ಆ ಯುವಕ ಡಿಎಂಕೆ ಪಕ್ಷದ ಕಾರ್ಯಕರ್ತನಾಗಿದ್ದಾನೆ. ಆತನಲ್ಲಿ ಅಲ್ಲಿಂದ ಹಿಂದೆ ಸರಿಯುವಂತೆ ಹೇಳಿದ ಸ್ಟಾಲಿನ್ ಯುವಕನ ಕಪಾಳಕ್ಕೆ ಬಾರಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದಾಗ್ಯೂ, ಸಹಪ್ರಯಾಣಿಕನಾದ ಯುವಕನಲ್ಲಿ ಮಹಿಳೆಯರ ಪಕ್ಕದಿಂದ ಹಿಂದೆ ಸರಿಯುವಂತೆ ಸ್ಟಾಲಿನ್ ಹೇಳಿದ್ದು, ತಮ್ಮ ನಾಯಕ ತಪ್ಪೇನು ಮಾಡಿಲ್ಲ ಡಿಎಂಕೆ ಹೇಳಿಕೆ ನೀಡಿದೆ.

ಸ್ಟಾಲಿನ್ ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ತಾಣಗಳಲ್ಲಿಯೂ ಹರಿದಾಡಿದ್ದು, ಇದೀಗ ವಿವಾದ ಸೃಷ್ಟಿಸಿದೆ.

ಏತನ್ಮಧ್ಯೆ, ಸ್ಟಾಲಿನ್ ಅವರ ಕೃತ್ಯವನ್ನು ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ ಖಂಡಿಸಿದ್ದಾರೆ.

ಕೊಯಂಬೇಡು ನಿಂದ ಅಲಂದೂರಿಗೆ ಸ್ಟಾಲಿನ್ ತಮ್ಮ ಕಾರ್ಯಕರ್ತರೊಂದಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com