ನಾಯಿಗೂ ಸಿಕ್ತು ಆಧಾರ್ ಕಾರ್ಡ್

ನಾಯಿಗೆ ಆಧಾರ್ ಕಾರ್ಡ್‌ ಸಿಕ್ಕಿರುವ ಸೋಜಿಗದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ...
ಆಧಾರ್ ಕಾರ್ಡ್
ಆಧಾರ್ ಕಾರ್ಡ್
ಭಿಂಡ್: ನಾಯಿಗೆ ಆಧಾರ್ ಕಾರ್ಡ್‌ ಸಿಕ್ಕಿರುವ ಸೋಜಿಗದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಉಮ್ರಿಯಲ್ಲಿನ ಆಧಾರ್ ಕಾರ್ಡ್ ಕೇಂದ್ರದಲ್ಲಿ ನಾಯಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ನಾಯಿಯ ಹೆಸರು ಟಾಮಿ ಸಿಂಗ್ ಅದರ ತಂದೆಯ ಹೆಸರು ಶೇರ್ ಸಿಂಗ್, ಹುಟ್ಟಿದ ದಿನಾಂಕ 26-11-2009 ಎಂದು ಕಾರ್ಡ್‌ನಲ್ಲಿ ನಮೂದಿಸಲಾಗಿದೆ. 
'ಆಜಂ ಖಾನ್ ಮೇಲ್ವಿಚಾರಣೆಯ ಆಧಾರ್ ಕಾರ್ಡ್ ಕೇಂದ್ರದಿಂದ ಆಧಾರ್ ಕಾರ್ಡ್ ಪಡೆದುಕೊಳ್ಳುವಲ್ಲಿ ಬಹಳ ಸಮಸ್ಯೆಗಳಾಗುತ್ತಿವೆ. ನಾಯಿ ಸೇರಿದಂತೆ ಜಾನುವಾರುಗಳಿಗೂ ಇಲ್ಲಿ ಆಧಾರ್ ಕಾರ್ಡ್ ನೀಡಲಾಗುತ್ತಿದೆ', ಎಂದು ಕಿತಿ ಗ್ರಾಮದ ವ್ಯಕ್ತಿಯೊಬ್ಬರು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 
ಆಜಂ ಖಾನ್ ನ ಮೇಲ್ವಿಚಾರಣೆಯಲ್ಲಿ ಈ ಘಟನೆ ಸಂಭವಿಸಿದ್ದು, ಈ ಸಂಬಂಧ ಪೊಲೀಸರು ವಂಚನೆ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದು ಕೈ ತಪ್ಪಿನಿಂದ ಆದ ದೋಷವೋ ಅಥವಾ ಉದ್ದೇಶಪೂರ್ವಕವಾಗಿ ಆಗಿರುವುದೋ ಎಂದು ತನಿಖೆಯ ಬಳಿಕವಷ್ಟೇ ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಈ ಹಿಂದೆ ಗುಜರಾತ್‌ನಲ್ಲಿ ಸೋನು' ಹೆಸರಿನ ನಾಯಿಗೆ ಆಧಾರ್ ಕಾರ್ಡ್ ನೀಡಲಾಗಿತ್ತು. ನಾಯಿಯ ಹಸ್ತ, ಕಣ್ಣಿನ ಮಾದರಿ ಪಡೆಯಲಾಗಿತ್ತು. ನಾಯಿಗೆ ಆಧಾರ್ ಕಾರ್ಡ್ ನೀಡಿದ್ದ ಕಾರಣ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com