

ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನಂತರ ಗೃಹ ಸಚಿವ ರಾಜನಾಥ್ ಸಿಂಗ್ ಟ್ವಿಟರ್‌ನಲ್ಲಿ 5 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
ಗೃಹ ಸಚಿವರು ಜುಲೈ 2014ರಲ್ಲಿ ಸರ್ಕಾರಿ ಟ್ವಿಟರ್ ಖಾತೆ ತೆರೆದಿದ್ದು, @HMOIndiaಗೆ ಕಳೆದ ರಾತ್ರಿ ಫಾಲೋಯರ್ಸ್ ಗಳ ಸಂಖ್ಯೆ ಐದು ಲಕ್ಷ ದಾಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಖಾತೆಗೆ 68 ಲಕ್ಷ ಫಾಲೋಯರ್ಸ್ ಇದ್ದು, ಪ್ರಧಾನಿ ನಂತರ ಗೃಹ ಸಚಿವರೇ ಹೆಚ್ಚು ಪಾಲೋಯರ್ಸ್ ಹೊಂದಿದ್ದಾರೆ.
ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ವೈಯಕ್ತಿಕ ಖಾತೆ @BJPRajnathsinghಗೆ 16 ಲಕ್ಷ ಫಾಲೋಯರ್ಸ್ ಇದ್ದಾರೆ. ಅಧಿಕೃತ ಟ್ವೀಟರ್ ಖಾತೆಯಲ್ಲಿ ಸಚಿವರ ಹೇಳಿಕೆಗಳು, ಕಾರ್ಯನೀತಿಗಳು, ಕಾರ್ಯಕ್ರಮಗಳು ಹಾಗೂ ಅವರು ಭಾಗವಹಿಸಿದ ಕಾರ್ಯಕ್ರಮಗಳ ಫೋಟೋಗಳನ್ನು ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ.