

ನವದೆಹಲಿ: ಭಾರತೀಯ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಪಾಕಿಸ್ತಾನ ಸೇನೆ ಭಾರತದ ಪತ್ತೇದಾರಿ ಡ್ರೋನ್ ಅನ್ನು ಹೊಡೆದುರುಳಿಸಿದೆ.
ಪಾಕಿಸ್ತಾನ ಪ್ರಾದೇಶಿಕ ಸಮಗ್ರತೆ ಉಲ್ಲಂಘನೆ ಕಾರಣ ನೀಡಿರುವ ಪಾಕ್ ಸೇನೆ ಭಾರತದ ಪತ್ತೇದಾರಿ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಕಳೆದ ವಾರವಷ್ಟೇ ರಷ್ಯಾದ ಬ್ರಿಕ್ಸ್ ಶೃಂಗಾಸಭೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ರನ್ನು ಭೇಟಿ ಉಭಯ ದೇಶಗಳ ನಡುವ ಸಮಸ್ಯೆಗಳ ಪರಿಹಾರ ಸಂಬಂಧ ಮಾತುಕತೆ ನಡೆಸಿದ್ದು ಇದಾದ ಕೆಲ ದಿನಗಳಲ್ಲೇ ಪಾಕ್ ಸೇನೆ ಈ ದುಷ್ಕೃತ್ಯ ಎಸಗಿದೆ.