ವಿಜಯ್ ಮಲ್ಯಗೆ ವಕ್ಫ್ ಮಂಡಳಿ ನೋಟಿಸ್

ಮೀರತ್‍ನಲ್ಲಿ ವಿಜಯ್ ಮಲ್ಯ ಖರೀದಿಸಿರುವ ವಕ್ಫ್ ಗೆ ಸೇರಿದ ಜಮೀನಿನಲ್ಲಿ ಮದ್ಯ ತಯಾರಿಕೆ ಘಟಕ ಸ್ಥಾಪಿಸಿರುವುದನ್ನು...
ವಿಜಯ್ ಮಲ್ಯ
ವಿಜಯ್ ಮಲ್ಯ

ಲಖ್ನೋ: ಮೀರತ್‍ನಲ್ಲಿ ವಿಜಯ್ ಮಲ್ಯ ಖರೀದಿಸಿರುವ ವಕ್ಫ್ ಗೆ ಸೇರಿದ ಜಮೀನಿನಲ್ಲಿ ಮದ್ಯ ತಯಾರಿಕೆ ಘಟಕ ಸ್ಥಾಪಿಸಿರುವುದನ್ನು ವಿರೋಧಿಸಿರುವ ಉತ್ತರ ಪ್ರದೇಶದ ಶಿಯಾ ವಕ್ಫ್ ಕೇಂದ್ರ ಮಂಡಳಿ ಮಲ್ಯಗೆ ನೋಟಿಸ್ ಜಾರಿ ಮಾಡಿದೆ.

ಮೀರತ್‍ನ ಅಬ್ದುಲ್ಲಾಪುರ್ ನಲ್ಲಿ ಮಲ್ಯ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ 2002ರಲ್ಲಿ ಭೂಮಿ ಖರೀದಿಸಿ ಡಿಸ್ಟಿಲರಿ ಸ್ಥಾಪಿಸಲಾಗಿದೆ. ಇದನ್ನು ವಿರೋಧಿಸಿ ಅಬ್ದುಲ್ಲಾಪುರ ಮಸೀದಿಯ ಹೊಸ ಮುತುವಲ್ಲಿ ಜುಲೈ.2ರಂದು ವಕ್ಫ್ ಬೋಡ್ರ್ ಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ದಾಖಲೆಗಳನ್ನು ಪರಿಶೀಲಿಸಿರುವ ಮಂಡಳಿ ಮಲ್ಯಗೆ ಆಗಸ್ಟ್ 10ರಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com