ಕಾಂಗ್ರೆಸ್, ಬಿಜೆಪಿಗಿಂತ ಆಪ್ ಭಿನ್ನವಿಲ್ಲ: ಯೋಗೇಂದ್ರ ಯಾದವ್

ಪಕ್ಷದ ವಿರುದ್ಧ ಬಂಡಾಯವೆದ್ದು, ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಯೋಗೇಂದ್ರ ಯಾದವ್ ಇದೀಗ ಮತ್ತೆ ಪಕ್ಷದ ವಿರುದ್ಧದ ತಮ್ಮ ವಾಗ್ಧಾಳಿಯನ್ನು ಮುಂದುವರೆಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಂತೆಯೇ ಆಮ್ ಆದ್ಮಿ ಪಕ್ಷವಿದ್ದು...
ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
Updated on: 

ನವದೆಹಲಿ: ಪಕ್ಷದ ವಿರುದ್ಧ ಬಂಡಾಯವೆದ್ದು, ಆಮ್ ಆದ್ಮಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಯೋಗೇಂದ್ರ ಯಾದವ್ ಇದೀಗ ಮತ್ತೆ ಪಕ್ಷದ ವಿರುದ್ಧದ ತಮ್ಮ ವಾಗ್ಧಾಳಿಯನ್ನು ಮುಂದುವರೆಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಂತೆಯೇ ಆಮ್ ಆದ್ಮಿ ಪಕ್ಷವಿದ್ದು, ಯಾವುದೇ ವ್ಯತ್ಯಾಸವಿಲ್ಲ ಎಂದು ಶನಿವಾರ ಹೇಳಿದ್ದಾರೆ.

ಪಕ್ಷಕ್ಕೆ ಅನುಭವವೇ ಇಲ್ಲದ ವ್ಯಕ್ತಿಗಳನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಕ್ಕಿಂತ ಆಮ್ ಆದ್ಮಿ ಪಕ್ಷ ಯಾವುದೇ ವಿಭಿನ್ನತೆ ಇಲ್ಲ. ಅಧಿಕಾರಿಕ್ಕೆ ಬರುವಾಗ ಆಪ್ ಹಲವಾರು ನಂಬಿಕೆ ಹಾಗೂ ಭರವಸೆಗಳಿದ್ದವು. ದೇಶದಲ್ಲಿ ಬದಲಾವಣೆಯಾಗುವುದನ್ನು ಇಚ್ಚಿಸುತ್ತಿದ್ದೆವು. ಆದರೀಗ ಆಪ್ ಪಕ್ಷದಲ್ಲಾಗುತ್ತಿರುವುದನ್ನು ನೋಡಿದರೆ ಇತರೆ ಪಕ್ಷಕ್ಕಿಂತ ಆಪ್ ವಿಭಿನ್ನವಿದೆ ಎಂದು ಭಾಸವಾಗುವುದಿಲ್ಲ.

ಮಹಿಳೆಯರಿಗಾಗಿ ಏನನ್ನೂ ಮಾಡದ, ಯಾವುದೇ ಅನುವಿಲ್ಲದ ಸ್ವಾತಿ ಮಲಿವಾಳ್ ಎಂಬುವವರನ್ನು ದೆಹಲಿಯ ಮಹಿಳಾ ಆಯೋಗ ಅಧ್ಯಕ್ಷೆಯಾಗಿ ಆಪ್ ಪಕ್ಷ ನೇಮಕ ಮಾಡಿದೆ. ಈ ವಿಷಯವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಆಪ್ ನ್ನು ಹೋಲಿಸಿ ನೋಡಿದರೆ ಇತರೆ ಪಕ್ಷಗಳಿಗೂ ಆಪ್ ಗೂ ಇರುವ ವ್ಯತ್ಯಾಸ ತಿಳಿಯುತ್ತದೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಭೂಷಣ್ ಹಾಗೂ ಯಾದವ್ ಅವರನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸಲು ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ. ಅವರಿಬ್ಬರೂ ಮರುಸೇರ್ಪಡೆಗೊಂಡರೆ ಪಕ್ಷಕ್ಕೆ ಒಳ್ಳೆಯದು ಹಾಗೂ ಇದರಿಂದ ನನಗೆ ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com