

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಟೀಕೆಗೊಳಗಾದ ಮರು ದಿನವೇ ಪ್ರದಾನಿ ನರೇಂದ್ರ ಮೋದಿ ಸಂಸದ ಶಶಿ ತರೂರ್ ಅವರನ್ನು ಹೊಗಳಿದ್ದಾರೆ.
ಬ್ರಿಟಿಷ್ ವಸಾಹತುಶಾಹಿಯಿಂದ, ವಸಾಹತು ದೇಶಗಳಿಗೆ ಆಗಿರುವ ಅನ್ಯಾಯ ಅಥವಾ ಉಪಯೋಗಗಳ ಬಗ್ಗೆ ಆಕ್ಸ್ ಫರ್ಡ್ ಯೂನಿಯನ್ ನಡೆಸಿದ್ದ ಚರ್ಚೆಯಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಭಾರತದಲ್ಲಿ ಬ್ರಿಟಿಷರು ನಡೆಸಿದ ೨೦೦ ವರ್ಷಗಳ ದುರಾಕ್ರಮಣ ಆಡಳಿತವನ್ನು ತಮ್ಮ ಅದ್ಭುತ ಮಾತು ಕಲಾಗಾರಿಕೆಯೊಂದಿಗೆ ಟೀಕಿಸಿರುವ ಶಶಿ ತರೂರ್ ಗೆ ನರೇಂದ್ರ ಮೋದಿ ಶಹಬ್ಬಾಸ್ ಗಿರಿ ನೀಡಿದ್ದಾರೆ.
ಶಶಿ ತರೂರ್ ಅವರ ಭಾಷಣ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿ ಮೂಡಿಸಲು ಸ್ಫೂರ್ತಿಯಾಗಿದೆ. ತರೂರ್ ತುಂಬಾ ಪರಿಣಾಮಕಾರಿಯಾಗಿ ವಾದ ಮಾಡಿದ್ದಾರೆ ಎಂದು ಮೋದಿ ಹೊಗಳಿದ್ದಾರೆ.
ದೆಹಲಿಯಲ್ಲಿ ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಸ್ಪೀಕರ್ ರಿಸರ್ಚ್ ಇನಿಶಿಯೇಟಿವ್ ರೀಸರ್ಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಶಿ ತರೂರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.