ಚರ್ಚೆ ನಡೆಸಲು ಒಗ್ಗೂಡದೇ ಸಿಗರೇಟ್ ಸೇದುವ ಕೊಠಡಿಗಾಗಿ ಒಗ್ಗೂಡಿದ ಸಂಸದರು!

ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸದೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಸಂಸತ್ ಕಲಾಪವನ್ನು ವ್ಯರ್ಥ ಮಾಡುವ ಸಂಸದರು ಸಿಗರೇಟ್ ಸೇದುವುದಕ್ಕಾಗಿ ಒಗ್ಗೂಡಿದ್ದಾರೆ.
ಧೂಮಪಾನ(ಸಾಂದರ್ಭಿಕ ಚಿತ್ರ)
ಧೂಮಪಾನ(ಸಾಂದರ್ಭಿಕ ಚಿತ್ರ)
Updated on: 

ನವದೆಹಲಿ: ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸದೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಸಂಸತ್ ಕಲಾಪವನ್ನು ವ್ಯರ್ಥ ಮಾಡುವ ಸಂಸದರು ಸಿಗರೇಟ್ ಸೇದುವುದಕ್ಕಾಗಿ ಒಗ್ಗೂಡಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕಿತ್ತಾಡುವ ಸಂಸದರು ಸಿಗರೇಟ್ ಸೇದುವ ವಿಷಯದಲ್ಲಿ ಮಾತ್ರ ಪಕ್ಷ, ಸಿದ್ಧಾಂತದ ಭೇದಗಳನ್ನು ಮರೆತು ಒಗ್ಗಟ್ಟಿನಿಂದಿರುತ್ತಾರೆ. ಮುಂಗಾರು ಅಧಿವೇಶನ ಪ್ರಾರಂಭವಾದ ದಿನದಂದೇ, ಆಡಳಿತ ಪಕ್ಷದ ಮುಖಂಡರ ವಿರುದ್ಧ ಆರೋಪಿಸಿ ಗದ್ದಲ ಉಂಟು ಮಾಡಿದ್ದ ಪ್ರತಿಪಕ್ಷ ಸಂಸದರು, ಸಂಸತ್ ನಲ್ಲಿ ಸಂಸದರು ಸಿಗರೇಟ್ ಸೇದಲೆಂದೇ ಪ್ರತ್ಯೇಕ ಕೊಠಡಿ ನೀದಬೇಕೆಂದು ಆಡಳಿತ ಪಕ್ಷದ ಸಂಸದರೊಂದಿಗೆ ಸೇರಿ ಸಿಗರೇಟ್ ಸೇದಲು ಕೊಠಡಿಯನ್ನು ನೀಡಬೇಕೆಂದು ಸುಮಿತ್ರಾ ಮಹಾಜನ್ ಗೆ ಮನವಿ ಸಲ್ಲಿಸಿದ್ದಾರೆ.

ಸಂಸತ್ ನ ಸೆಂಟ್ರಲ್ ಹಾಲ್, ಪಾರ್ಲಿಮೆಂಟ್ ಹೌಸ್ ನ್ನು 2004 ರಲ್ಲಿ ನೊ ಸ್ಮೋಕಿಂಗ್" ಜೋನ್ ಎಂದು ಘೋಷಿಸಲಾಗಿತ್ತು, ಇದಕ್ಕೂ ಮುನ್ನ ಸೆಂಟ್ರಲ್ ಹಾಲ್ ಬಳಿ ಇದ್ದ 20 ಬಿ ಕೊಠಡಿಯನ್ನು ಸಂಸದರ ಧೂಮಪಾನಕ್ಕಾಗಿ ನಿಡಲಾಗಿತ್ತು. ಇತ್ತೀಚೆಗಷ್ಟೇ ಅದನ್ನು ಶೀಘ್ರಲಿಪಿಕಾರರು ಅದನ್ನು ಬಳಕೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಈಗ ಧೂಮಪಾನ ಮಾಡುವ ಸಂಸದರು ನಿರಾಶ್ರಿತರಾಗಿದ್ದಾರೆ. ಆದ್ದರಿಂದ ತಾವು ಧೂಮಪಾನ ಮಾಡಲು 20  ಬಿ ಕೊಠಡಿಯನ್ನೇ ಬಿಟ್ಟುಕೊಡಬೇಕೆಂದು ಆಡಳಿತ, ವಿರೋಧ ಪಕ್ಷದ ಸಂಸದರು ಸುಮಿತ್ರಾ ಮಹಾಜನ್ ಗೆ ಪಕ್ಷಾತೀತವಾಗಿ ಮನವಿ ಮಾಡಿದ್ದಾರೆ.
ತುರ್ತಾಗಿ ಬಗೆಹರಿಯಬೇಕಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಲು ಒಗ್ಗೂಡಬೇಕಿರುವ ಸಂಸದರು, ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುವ ವೇಳೆ  ಗದ್ದಲವೆಬ್ಬಿಸಿ, ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಿಗರೇಟ್ ಸೇದುದಕ್ಕೆ ಮಾತ್ರ ಪಕ್ಷಾತೀತವಾಗಿ ಒಗ್ಗೂಡಿ ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com