ನವದೆಹಲಿ: ತಮ್ಮ ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ ಹತ್ತನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಅವರ ಭಾಷಣದ ಮುಖ್ಯಾಂಶಗಳು:
ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿದೆ. ಇದರಿಂದ ರೈತರಿಗೆ ಋತುಮಾನದ ಬೆಳೆ ಬೆಳೆಯಲು ಸಹಾಯವಾಗುತ್ತದೆ.
ಇಂದು ಕಾರ್ಗಿಲ್ ಯುದ್ಧವನ್ನು ಗೆದ್ಧ ದಿನವಾಗಿದೆ. ಯುದ್ಧದಲ್ಲಿ ಧೈರ್ಯದಿಂದ ಹೋರಾಡಿ ಪ್ರಾಣವನ್ನರ್ಪಿಸಿದ ಎಲ್ಲಾ ಸೈನಿಕರಿಗೆ ನನ್ನ ನಮನಗಳು. ಅವರ ತ್ಯಾಗ, ಬಲಿದಾನಗಳು ಎಂದಿಗೂ ಅಮರ.
ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ. ಪ್ರತಿಯೊಬ್ಬರು ತಮ್ಮ ಕುಟುಂಬದಲ್ಲಿ ಕಿರಿಯರಿಗೆ ರಸ್ತೆ ಸುರಕ್ಷತೆ ಬಗ್ಗೆ ಹೇಳಿಕೊಡಬೇಕು.
ಕರ್ಮಚಾರಿ ಅಂದರೆ ನೌಕರರು ಕರ್ಮಯೋಗಿಯಾಗಬೇಕು.
ಕೆಲಸದಲ್ಲಿ ಆಸಕ್ತಿ ವಹಿಸಬೇಕಾದುದು ಅತೀ ಮುಖ್ಯ. ಒಬ್ಬ ರೈಲ್ವೆ ಉದ್ಯೋಗಿ ರೈ ಲ್ವೆಗೆ ಸಂಬಂಧಪಟ್ಟ ದೃಶ್ಯಗಳನ್ನು ಚಿತ್ರ ಬಿಡಿಸುತ್ತಾನೆ ಎಂದು ನಾನು ಇತ್ತೀಚೆಗೆ ಕೇಳಲ್ಪಟ್ಟೆ. ಅಂದರೆ ನಾವು ಮಾಡುವ ಕೆಲಸದಲ್ಲಿ ಹೇಗೆ ಇನ್ನಷ್ಟು ಆಸಕ್ತಿ ಬೆಳೆಸಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.
ಹಳ್ಳಿಗಳಿಗೆ 24 ಗಂಟೆ, ವಾರದಲ್ಲಿ ಏಳು ದಿನ ನಿರಂತರ ವಿದ್ಯುತ್ ನೀಡಲು ಕೇಂದ್ರ ಸರ್ಕಾರ ಪ್ರಯತ್ನ.
ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಕಳವಳದ ವಿಷಯ.