ಬಾಲಕಿಯಿಂದ ಆತ್ಮಹತ್ಯಾ ದಾಳಿ

ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದು ಗೊತ್ತು. ಆದರೆ ಉತ್ತರ ಕ್ಯಾಮರೂನ್‍ನ ಮರೋವಾದಲ್ಲಿ 12 ವರ್ಷದ ಬಾಲಕಿ ಬಾರ್ ಮೇಲೆ ಇಂಥ ಕುಕೃತ್ಯ ಎಸಗಿದ್ದಾಳೆ...
ದಾಳಿ ವೇಳೆ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
ದಾಳಿ ವೇಳೆ ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
Updated on

ಯಾಂಡೆ (ಕ್ಯಾಮರೂನ್): ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವುದು ಗೊತ್ತು. ಆದರೆ ಉತ್ತರ ಕ್ಯಾಮರೂನ್‍ನ ಮರೋವಾದಲ್ಲಿ 12 ವರ್ಷದ ಬಾಲಕಿ ಬಾರ್ ಮೇಲೆ ಇಂಥ ಕುಕೃತ್ಯ ಎಸಗಿದ್ದಾಳೆ.

ಈ ಘಟನೆಯಲ್ಲಿ ಕನಿಷ್ಠ 20 ಮಂದಿ ಅಸುನೀಗಿದ್ದಾರೆ. ಶನಿವಾರ ನಡೆದ ಅವಳಿ ಬಾಂಬ್ ಸ್ಪೋಟದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಈ ಬಾಂಬ್ ದಾಳಿ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಬಾರ್‍ಗೆ ಆಗಮಿಸಿದ ಬಾಲಕಿ ಕೌಂಟರ್ ಸಮೀಪಕ್ಕೆ ಆಗಮಿಸಿ ತನ್ನನ್ನು ತಾನು ಸ್ಪೋಟಿಸಿಕೊಂಡಳು.

ಘಟನೆಯಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕ್ಯಾಮರೂನ್‍ನ ಉತ್ತರ ಭಾಗದಲ್ಲಿ ಬೋಕೋ ಹರಾಮ್ ಉಗ್ರ ಸಂಘಟನೆ ಹಲವು ಬಾರಿ ಬಾಂಬ್ ದಾಳಿ ನಡೆಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com