

ನವದೆಹಲಿ: ಮುಂಬೈ ಸರಣಿ ಬಾಂಬ್ ಸ್ಪೋಟದ ರುವಾರಿಗಳಲ್ಲಿ ಒಬ್ಬನಾದ ಯಾಕೂಬ್ ಮೆಮನ್‍ಗೆ ಗಲ್ಲು ಶಿಕ್ಷೆ ವಿಧಿಸಿದ ಮಾದರಿಯಲ್ಲಿಯೇ ಬಾಂಬ್ ಸ್ಪೋಟದ ಇತರೆ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
ಯಾಕೂಬ್ ಮೆಮನ್‍ಗೆ ಗಲ್ಲಿ ಶಿಕ್ಷೆ ವಿಧಿಸಲು ತೋರಿದ ಬದ್ಧತೆಯನ್ನು ಉಳಿದ ಉಗ್ರರ ವಿಚಾರದಲ್ಲಿಯೂ ತೋರಬೇಕು, ಈ ಕುರಿತು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಮುಂದಾಗುವ ಅಗತ್ಯವಿದೆ. ಮೆಮನ್ ಗಲ್ಲು ಶಿಕ್ಷೆ ವಿಧಿಸಿದ ರೀತಿಯಲ್ಲೇ ಇನ್ನುಳಿದಂತಾ ಎಲ್ಲಾ ಭಯೋತ್ಪಾದನ ಪ್ರಕರಣಗಳಿಗೂ ಅನ್ವಯವಾಗಬೇಕು. ಇದೇ ರೀತಿಯ ಆತುರ ಆ ಪ್ರಕರಣಗಳಲ್ಲೂ ಇರಬೇಕು ಎಂದು ಹೇಳಿದ್ದಾರೆ.
ಯಾವುದೇ ಧರ್ಮದಲ್ಲಿನ ಉಗ್ರರಿಗೂ ಇದೇ ರೀತಿ ಮಾಡುವ ಬದ್ದತೆಯನ್ನು ಕೇಂದ್ರ ಸರ್ಕಾರ ಪ್ರದರ್ಶಿಸಬೇಕು. ಉಗ್ರರ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಟ್ವೀಟ್ ಮಾಡಿದ್ದಾರೆ.