

ನವದೆಹಲಿ: ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಅಮೆರಿಕದ ಯುವತಿಗೆ ಟಾಕ್ಸಿ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿ ಜೈಲು ಪಾಲಾದ ಘಟನೆ ಬೆಳಕಿಗೆ ಬಂದಿದೆ.
ಭಾರತಕ್ಕೆ ಆಗಮಿಸಿದ್ದ 20 ವರ್ಷ ಪ್ರಾಯದ ಅಮೆರಿಕನ್ ಪ್ರವಾಸೀ ತರುಣಿಗೆ ಕಳೆದವಾರ ಖಾಸಗಿ ಸಂಸ್ಥೆಯ ಟ್ಯಾಕ್ಸಿ ಚಾಲಕನಾದ ದೇವರಾಜ್ ಚೌವಾಣ್(30) ಎಂಬಾತ ಚಿತ್ತರಂಜನ್ ಪಾರ್ಕ್ ಪ್ರದೇಶದಲ್ಲಿ ಲೈಂಗಿಕವಾಗಿ ಕಿರುಕುಳ ನೀಡಿದ್ದನು.
ಲೈಂಗಿಕ ಕಿರುಕುಳಕ್ಕೆ ಗುರಿಯಾದ ಬಳಿಕ ಆಕೆ ಅಹ್ಮದ್ ನಗರಕ್ಕೆ ಹೋಗಿದ್ದು, ಭಯದಿಂದ ಯಾರೊಂದಿಗೂ ವಿಷಯ ತಿಳಿಸಿರಲಿಲ್ಲ. ನಂತರ ಆಕೆಯ ಸಹವರ್ತಿಗಳಲ್ಲಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿದ್ದು, ಅಹ್ಮದಾನಗರ್ ಎಸ್ ಪಿ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿ, ತನ್ನ ದೇಶಕ್ಕೆ ಮರಳಿದ್ದರು.
ಚಿತ್ತರಂಜನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ರಾತ್ರಿ ಲಕ್ಷ್ಮೀಬಾಯಿ ನಗರದಲ್ಲಿ ಆರೋಪಿಯನ್ನು ಬಂಧಿಸಿದ್ದು, ಎಫ್ ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.