

ಅಹಮದಾಬಾದ್: ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೆ ಮಂಗಳವಾರ ರೈ ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ಪದವಿ ನೀಡಿ ಗೌರವಿಸಿದೆ.
ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ವಿದ್ಯಾ ಬಾಲನ್ ಅವರಿಗೆ ಈ ಗೌರವ ನೀಡಿರುವುದಾಗಿ ವಿವಿ ತಿಳಿಸಿದೆ.
ಗೌರವ ಸ್ವೀಕರಿಸಿ ಮಾತನಾಡಿದ ನಟಿ, ಈ ಪದವಿ ಸ್ವೀಕರಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಒಬ್ಬ ನಟ, ನಟನಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದು ಇಲ್ಲ ಎಂದು ಹೇಳಿದ್ದಾರೆ.