ಟೈಟ್ಲರ್ ಗೆ ಕ್ಲೀನ್ ಚಿಟ್: ಸಿಖ್ ಸಮುದಾಯಗಳ ಪ್ರತಿಭಟನೆ

ಸುಮಾರು 3 ಸಾವಿರಕ್ಕೂ ಹೆಚ್ಚು ಅಮಾಯಕ ಸಿಖ್ ಜನರ ಮಾರಣ ಹೋಮ ನಡೆದ 1984ರ ಸಿಖ್ ದಂಗೆಯ ಪ್ರಮುಖ ಆರೋಪಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ವಿರೋಧಿಸಿರುವ ಸಿಖ್ ಸಮುದಾಯಗಳು ಶುಕ್ರವಾರ ಕಾಂಗ್ರೆಸ್ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ...
ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್
ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್
Updated on: 

ನವದೆಹಲಿ: ಸುಮಾರು 3 ಸಾವಿರಕ್ಕೂ ಹೆಚ್ಚು ಅಮಾಯಕ ಸಿಖ್ ಜನರ ಮಾರಣ ಹೋಮ ನಡೆದ 1984ರ ಸಿಖ್ ದಂಗೆಯ ಪ್ರಮುಖ ಆರೋಪಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ವಿರೋಧಿಸಿರುವ ಸಿಖ್ ಸಮುದಾಯಗಳು ಶುಕ್ರವಾರ ಕಾಂಗ್ರೆಸ್ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಇಂದು ಬೆಳಿಗ್ಗೆಯಿಂದಲೇ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ ಮುಂದೆ  ಸಿಖ್ ಸಮುದಾಯಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ವೇಳೆ ಟೈಟ್ಲರ್ ಅವರ ಪ್ರತಿಕೃತಿಯನ್ನು ದಹಿಸಿ ಸೋನಿಯಾ ಗಾಂಧಿ ಹಾಗೂ ಟೈಟ್ಲರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿವೆ.

ನೌಕಾಪಡೆ ಮಾಹಿತಿ ಸೋರಿಕೆ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ವರ್ಮಾ ಸಿಬಿಐ ವಿಚಾರಣೆ ವೇಳೆ ಸಿಂಗ್-ಟೈಟ್ಲರ್ ನಂಟಿನ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದರು. ''ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 2008ರಲ್ಲಿ ಭೇಟಿಯಾದ ಬಳಿಕ ಸಿಖ್ ವಿರೋಧಿ ದಂಗೆಯ ಪ್ರಕರಣದಿಂದ ನನಗೆ ಮುಕ್ತಿ ಸಿಕ್ಕಿತು ಎಂದು ಜಗದೀಶ್ ಟೈಟ್ಲರ್ ಅವರು ನನಗೆ ತಿಳಿಸಿದ್ದರು. ಅಷ್ಟೇ ಅಲ್ಲ ಕೋಮುಗಲಭೆಯ ಪ್ರಮುಖ ಸಾಕ್ಷಿಯೊಬ್ಬರ ಮೇಲೂ ಟೈಟ್ಲರ್ ಪ್ರಭಾವ ಬೀರಲು ಯತ್ನಿಸಿದ್ದರು,'' ಎಂದು ವರ್ಮಾ ಸಿಬಿಐ ವಿಚಾರಣೆ ವೇಳೆ ಹೇಳಿದ್ದರು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com