

ನವದೆಹಲಿ: ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಭೂಮಿ ತಾಯಿಯನ್ನು ರಕ್ಷಿಸಬೇಕೆಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ನವದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಗಿಡವನ್ನು ನೆಟ್ಟು ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ನಿಟ್ಟಿನಲ್ಲಿ ನಾಗರಿಕರು ಕೆಲಸ ಮಾಡಬೇಕೆಂದು ಮೋದಿ ಸಲಹೆ ನೀಡಿದರು.
ಜನ ಹೆಚ್ಚು ಮರಗಳನ್ನು ನೆಡುವಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ನಾವು ಪರಿಸರ ಸಂರಕ್ಷಿಸಿ ಅವರಿಗೆಅನುಕೂಲ ಮಾಡಿಕೊಡುತ್ತೇವೆ ಎಂದು ಹೆಮ್ಮೆ ಪಡಬೇಕು ಎಂದರು. ಮುಂದಿನ ದಿನಗಳಲ್ಲಿ ಎದುರಾಗುವ ತೊಂದರೆಯಿಂದ ಭೂಮಿ ತಾಯಿಯನ್ನು ರಕ್ಷಿಸಲು ಪರಿಸರದ ಜೊತೆ ಸಾಮರಸ್ಯದಿಂದ ಬದುಕುವುದು ಇರುವ ಒಂದೇ ದಾರಿ ಎಂದು ಹೇಳಿದರು.
ನಮ್ಮ ಪೂರ್ವಿಕರು ಪರಿಸರ ಸಂರಕ್ಷಣೆ ಮಾಡಿ ನಮೆಗ ಕೊಡುಗೆ ನೀಡಿದ್ದಾರ. ನಾವು ಅದೇ ದಾರಿಯಲ್ಲಿ ಮುಂದುವರಿದು ನಮ್ಮ ಮುಂದಿನ ಪೀಳಿಗೆಗೆ ಪರಿಸರ ರಕ್ಷಿಸಬೇಕೆಂದು ಕರೆ ನೀಡಿದರು.