ಇಸಿಸ್ ಉಗ್ರನ ಜೀವ ಹೋಗಿದ್ದು ಸೆಲ್ಫಿಯಿಂದ!

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವತಿಯೊಬ್ಬಳು ರೈಲಿನಿಂದ ಬಿದ್ದದ್ದು, ಮತ್ತೊಬ್ಬ ಪೈಲಟ್ ತನ್ನ ಚಾಲನೆಯ ಸೆಲ್ಫಿ ತೆಗೆಯಲು ಹೋಗಿ ವಿಮಾನ ನೆಲಕ್ಕೆ...
ಇಸಿಸ್
ಇಸಿಸ್

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವತಿಯೊಬ್ಬಳು ರೈಲಿನಿಂದ ಬಿದ್ದದ್ದು, ಮತ್ತೊಬ್ಬ ಪೈಲಟ್ ತನ್ನ ಚಾಲನೆಯ ಸೆಲ್ಫಿ ತೆಗೆಯಲು ಹೋಗಿ ವಿಮಾನವನ್ನು ನೆಲಕ್ಕೆ ಅಪ್ಪಳಿಸಿದ್ದು, ಹೀಗೆ ಹತ್ತಾರು ಪ್ರಕರಣಗಳನ್ನು ನೋಡಿದ್ದೀರಾ... ಆದರೆ ವಿಚಿತ್ರ ಸಂಗತಿಯೆಂದರೆ ಇಸಿಸ್ ಸಂಘಟನೆಯ ಉಗ್ರನೊಬ್ಬ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿ ಜೀವ ಕಳೆದುಕೊಂಡಿದ್ದಾನೆ.

ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್(ಇಸಿಸ್) ಉಗ್ರನೊಬ್ಬ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ. ಆತ ಅಪ್ ಲೋಡ್ ಮಾಡಿದ 22 ಗಂಟೆಯೊಳಗಾಗಿ ಅಮೆರಿಕಾ ಪಡೆಗಳು ಆತ ತನ್ನ ಸಹಚರರೊಂದಿಗೆ ಅಡಗಿಕೊಂಡಿದ್ದ ಕಟ್ಟಡದ ಮೇಲೆ ಬಾಂಬ್ ದಾಳಿ ಹೊಡೆದುಳಿಸಿದ್ದಾನೆ.

ಇದುವರೆಗೂ ತಮ್ಮ ಕ್ರೂರ ಕೃತ್ಯದ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿ ವಿಕೃತಿ ಮೆರೆಯುತ್ತಿದ್ದ ಇಸಿಸ್ ಉಗ್ರರು ಅಮೆರಿಕಾ ಪಡೆಗಳ ಈ ದಾಳಿಯಿಂದಾಗಿ ಬೆಚ್ಚಿ ಬಿದ್ದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಹಾಗೂ ಫೋಟೋ ಅಪ್ ಲೋಡ್ ಮಾಡುವುದನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com