ಹಳಿಗೆ ಬಂದ ಆರ್‍ಜೆಡಿ, ಜೆಡಿಯು ಮೈತ್ರಿ

ಹಳಿ ತಪ್ಪಿದ್ದ ಆರ್‍ಜೆಡಿ ಮತ್ತು ಜೆಡಿಯು ಮೈತ್ರಿ ಮತ್ತೆ ಹಳಿಗೆ ಬಂದಿದೆ. ಹಲವು ದಿನಗಳ ವಾಗ್ಯುದ್ಧ, ಅಸಮಾಧಾನದ ಬಳಿಕ ...
ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್
ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್
Updated on: 

ನವದೆಹಲಿ: ಹಳಿ ತಪ್ಪಿದ್ದ ಆರ್‍ಜೆಡಿ ಮತ್ತು ಜೆಡಿಯು ಮೈತ್ರಿ ಮತ್ತೆ ಹಳಿಗೆ ಬಂದಿದೆ. ಹಲವು ದಿನಗಳ ವಾಗ್ಯುದ್ಧ, ಅಸಮಾಧಾನದ ಬಳಿಕ ಕೊನೆಗೂ ಎರಡೂ ಪಕ್ಷಗಳ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿವೆ. ಬಿಹಾರ ವಿಧಾನಸಭೆ ಚುನಾವಣೆಯನ್ನು ಒಂದಾಗಿ ಎದುರಿಸುವುದಾಗಿ ಭಾನುವಾರ ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಜತೆಗೆ, ಸೀಟು ಹಂಚಿಕೆ ವಿಚಾರದಲ್ಲಿ ನಿರ್ಧರಿಸಲು 6 ಮಂದಿ ಸದಸ್ಯರ ಸಮಿತಿಯನ್ನೂ ರಚಿಸಲಾಗಿದೆ. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಮಾತ್ರ ಯಾರೂ ತುಟಿಬಿಚ್ಚಿಲ್ಲ. ಸಭೆಗೂ ಮುಂಚೆ ರಾಹುಲ್
ಭೇಟಿ: ಮುಖ್ಯಮಂತ್ರಿ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿಯೇ ಎರಡೂ ಪಕ್ಷಗಳ ನಡುವೆ ಬಿಕ್ಕಟ್ಟು ಉಂಟಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಲಾಲು, ``ಚರ್ಚೆ ಮಾಡದೇಯಾವುದರ ಬಗ್ಗೆಯೂ ನಿರ್ಧರಿಸಲು ಸಾಧ್ಯವಾಗದು. ಬಿಜೆಪಿಯನ್ನು ದೂರವಿಡುವ ಸಲುವಾಗಿ ಹೇಗಾದರೂ ಮಾಡಿ ಮೈತ್ರಿ ಮಾಡಿಯೇ ಮಾಡುತ್ತೇವೆ'' ಎಂದಿದ್ದರು. ನಿತೀಶ್ ಕುಮಾರ್ ಅವರೂ ಇದೇ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಭಾನುವಾರ ಜನತಾಪರಿವಾರದ ಸಭೆ ಆರಂಭವಾಗುವ ಮೊದಲು ನಿತೀಶ್ ಅವರು ಕಾಂಗ್ರೆಸ್ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com