ಅಯೋಧ್ಯೆಯಲ್ಲಿ ಹೈಟೆಕ್ ರಾಮ ವಸ್ತುಸಂಗ್ರಹಾಲಯ ನಿರ್ಮಿಸಲು ಚಿಂತನೆ

ರಾಮ ಮಂದಿರವೇ ಇಲ್ಲ, ಆದರೂ ಅಲ್ಲಿ ರಾಮ ವಸ್ತು ಸಂಗ್ರಹಾಲಯ ನಿರ್ಮಿಸಲು ಮೋದಿ ಸರ್ಕಾರ ಚಿಂತನೆ ನಡೆಸಿದೆ.....
ಅಯೋಧ್ಯೆಯಲ್ಲಿನ ರಾಮ ಮಂದಿರ
ಅಯೋಧ್ಯೆಯಲ್ಲಿನ ರಾಮ ಮಂದಿರ
Updated on: 

ನವದೆಹಲಿ: ರಾಮ ಮಂದಿರವೇ ಇಲ್ಲ, ಆದರೂ ಅಲ್ಲಿ ರಾಮ ವಸ್ತು ಸಂಗ್ರಹಾಲಯ ನಿರ್ಮಿಸಲು ಮೋದಿ ಸರ್ಕಾರ ಚಿಂತನೆ ನಡೆಸಿದೆ. ಬಹು ವಿವಾದಿತ ಹಾಗೂ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ವಿಷಯ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ. ಇಂತ ಅಯೋಧ್ಯೆಯಲ್ಲಿ ಇನ್ನೂ ರಾಮ ಮಂದಿರ ನಿರ್ಮಾಣವೇ ಆಗಿಲ್ಲ. ಆಗಲೇ ಬಿಜೆಪಿ ಸರ್ಕಾರ ರಾಮನ ಬಗ್ಗೆ ಪ್ರಚಾರ ಪಡಿಸಲು ವಸ್ತು ಸಂಗ್ರಹಾಲಯ ನಿರ್ಮಿಸಲು ಯೋಜಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.

ರಾಮ ಮ್ಯೂಸಿಯಂ ನಲ್ಲಿ ರಾಮನಿಗೆ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ದಾಖಲೆಗಳಿರುತ್ತವೆ. ಇದೊಂದು ಭವ್ಯವಾದ ಮ್ಯೂಸಿಯಂ ಆಗಿದ್ದು ಮರ್ಯಾದಾ ಪುರುಷ ರಾಮನಿಗೆ ಹಾಗೂ ರಾಮಾಯಣದ ಪವಿತ್ರ ಸಂಗ್ರಹಗಳಿರುತ್ತವೆ. ಮ್ಯೂಸಿಯಂ ನಿರ್ಮಾಣಕ್ಕೆ ಎಷ್ಟು ಅನುದಾನ ಸಿಗುತ್ತದೆ ಎಂಬುದನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ಕಟ್ಟಡ ನಿರ್ಮಿಸಲಾಗುವುದು. ಮುಂದಿನ ವರ್ಷ ಮ್ಯೂಸಿಯಂ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದರು.

ದೆಹಲಿಯ ಸ್ವಾಮಿ ನಾರಾಯಣ ಅಕ್ಷರಧಾಮ ದೇವಾಲಯ ಮಾದರಿಯಲ್ಲಿ ಮ್ಯೂಸಿಯಂ ನಿರ್ಮಿಸಲು ಉದ್ದೇಶಿಸಲಾಗಿದೆ. ಆ ದೇವಾಲಯದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ, ದೋಣಿ ಸವಾರಿ ಮತ್ತು ಸ್ವಾಮಿ ನಾರಾಯಣರ ಸಂಬಂಧಿಸಿದ ಚಿತ್ರಗಳು ಸೇರಿದಂತೆ ಹಲವು ಪ್ರಾಚ್ಯ ಸಂಶೋಧನಾ ವಸ್ತುಗಳನ್ನೊಳಗೊಂಡಿದೆ. ಅದೇ ಮಾದರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, 2017 ಅಂದರೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಮಹೇಶ್ ಶರ್ಮಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com