ದೇಶ

ಮಣಿಪುರ ಪೊಲೀಸರ ಕಾರ್ಯಾಚರಣೆ: ಮೂವರು ಉಗ್ರರ ಬಂಧನ

ಮಣಿಪುರ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದಾರೆ.....

ಮಣಿಪುರ ಪೊಲೀಸರ ಕಾರ್ಯಾಚರಣೆ: ಮೂವರು ಉಗ್ರರ ಬಂಧನ
ಜೂನ್ 4ರಂದು ನಡೆದ ದಾಳಿಯ ಚಿತ್ರ
Published On :

ಇಂಫಾಲ: ಜೂನ್ 4ರಂದು ಮಣಿಪುರದ ಚಾಂದೇಲ್ ನಲ್ಲಿ ಉಗ್ರರು ದಾಳಿ ನಡೆಸಿ 18 ಭಾರತೀಯ ಸೈನಿಕರನ್ನು ಹತ್ಯೆ ಸಂಬಂದ, ಕೂಂಬಿಂಗ್ ನಡೆಸುತ್ತಿರುವ ಮಣಿಪುರ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದಾರೆ.

ಇಂಫಾಲದ ಪಶ್ಚಿಮ ಜಿಲ್ಲೆಯ ಪೊಲೀಸ್ ಕಮಾಂಡೋಗಳು ಅಮಾಂಚತ್  ಪ್ರದೇಶದ ಎನ್ ಎಸ್ ಸಿ ಎನ್(ಕೆ) ಉಗ್ರ ಸಂಘಟನೆಯ ಅಧ್ಯಕ್ಷನೆಂದು ಘೋಷಿಸಿಕೊಂಡಿರುವ ಕುಮ್ಲೋ ಅಬಿ ಅನಾಲ್ ಸೇರಿದಂತೆ ಮೂವರು ಉಗ್ರರನ್ನು ಬಂಧಿಸಿದ್ದಾರೆ. ಇಂಫಾಲದ ಸೂಪರ್ ಮಾರ್ಕೆಟ್ ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮೂವರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಎನ್ ಎಸ್ ಸಿ ಎನ್(ಕೆ) ಸಂಘಟನೆಯ ಕಾರ್ಯಕರ್ತ ಪಮ್ಮೇಯಿ ಕಾಕಿಲಾಂಗ್ ಅಲಿಯಾ ಎಂಬಾತನನ್ನು ಚುಕುಲೊಂಗ್ ಎಂಬ ಗ್ರಾಮದಲ್ಲಿ ಕಮಾಂಡೋಗಳು ಬಂಧಿಸಿದ್ದಾರೆ. ಇನ್ನೊಬ್ಬ ಉಗ್ರನನ್ನು ಇಂಪಾಲ ಪೂರ್ವ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.