

ಕಾಬೂಲ್ : ಅಫ್ಘಾನಿಸ್ತಾನದ ರಸ್ತೆ ಬದಿಯಲ್ಲಿರಿಸಿದ್ದ ಬಾಂಬ್ ಸ್ಫೋಟಗೊಂಡು 19 ಜನರು ಸಾವಿಗೀಡಾಗಿದ್ದಾರೆ. ಒಂದೇ ಕುಟುಂಬಕ್ಕೆ ಸೇರಿದವರು ಈ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿಗೀಡಾದವರಲ್ಲಿ 9 ಮಕ್ಕಳು ಹಾಗು 8 ಮಹಿಳೆಯರು ಇದ್ದಾರೆ. 5 ಜನರಿಗೆ ಗಾಯಗಳಾಗಿವೆ.
ಬಾಂಬ್ ಸ್ಫೋಟದ ಹೊಣೆಯನ್ನು ಇಲ್ಲಿವರೆಗೆ ಯಾರೂ ಹೊತ್ತುಕೊಂಡಿಲ್ಲ. ತಾಲೀಬಾನ್ ಉಗ್ರರೇ ಈ ದಾಳಿಯಲ್ಲಿ ಕೈವಾಡ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಫ್ಘಾನ್ ಸೈನಿಕರ ವಾಹನವನ್ನು ಗುರಿಯಾಗಿರಿಸಿ ಈ ಬಾಂಬ್ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.