ಇಂಫಾಲದ ರಾಜಭವನ ಬಳಿ ಎಲ್ ಇಡಿ ಸ್ಫೋಟ

ಇಂಫಾಲದ ರಾಜಭವನದ ಬಳಿ ಸುಧಾರಿತ ಸ್ಪೋಟಕ ಸಾಧನವೊಂದು ಸ್ಫೋಟಗೊಂಡಿದೆ....
ಗೂಗಲ್ ಮ್ಯಾಪ್
ಗೂಗಲ್ ಮ್ಯಾಪ್
Updated on: 

ಇಂಫಾಲ: ಇಂಫಾಲದ ರಾಜಭವನದ ಬಳಿ ಸುಧಾರಿತ ಸ್ಪೋಟಕ ಸಾಧನವೊಂದು ಸ್ಫೋಟಗೊಂಡಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ವಷ್ಟ ಪಡಿಸಿದ್ದಾರೆ.

ಬೆಳಗ್ಗಿನ ಜಾವ ಸುಮಾರು 5.30 ರ ವೇಳೆಗೆ ರಾಜ ಭವನದ ಕಂಪೌಂಡ್ ಗೆ ಅತಿ ಸಮೀಪದಲ್ಲೇ ಸ್ಪೋಟ ಸಂಭವಿಸಿದೆ.  ಮಣಿಪುರ ವಿಧಾನಸಭೆ ಅಧಿವೇಶನ ಆರಂಭವಾಗುವುದಕ್ಕೆ ಕೆಲವು ಗಂಟೆಗಳ ಮೊದಲು ಸ್ಪೋಟ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಪೋಟ ಸಂಭವಿಸಿದ ನಂತರ ಪರಿಸ್ಥಿತಿ ಸಹಜವಾಗಿಯೇ ಇದ್ದು  ಎಂದಿನಂತೆ ವಿಧಾನ ಸಭೆ  ಅಧಿವೇಶನ ನಡೆಯಿತು. ಇನ್ನೂ ಇದುವರೆಗೂ ಯಾವುದೇ ಸಂಘಟನೆಗಳು ಘಟನೆಯ ಹೊಣೆ ಹೊತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com