ಅತ್ಯಾಚಾರಿ ಹತ್ಯೆ: 22 ಮಂದಿ ಬಂಧನ

ದಿಮಾಪುರದಲ್ಲಿ ನಡೆದ ಅತ್ಯಾಚಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಗಾಲ್ಯಾಂಡ್ ಪೊಲೀಸರು ಭಾನುವಾರ 22 ಮಂದಿಯನ್ನು ಬಂಧಿಸಿದ್ದಾರೆ...
ಅತ್ಯಾಚಾರಿ ವಿರುದ್ಧದ ಪ್ರತಿಭಟನೆ (ಸಂಗ್ರಹ ಚಿತ್ರ)
ಅತ್ಯಾಚಾರಿ ವಿರುದ್ಧದ ಪ್ರತಿಭಟನೆ (ಸಂಗ್ರಹ ಚಿತ್ರ)

ನವದೆಹಲಿ: ದಿಮಾಪುರದಲ್ಲಿ ನಡೆದ ಅತ್ಯಾಚಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ನಾಗಾಲ್ಯಾಂಡ್ ಪೊಲೀಸರು ಭಾನುವಾರ 22 ಮಂದಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಮಂದಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ನಡುವೆ, ಹತ್ಯೆಗೀಡಾದ ಅತ್ಯಾಚಾರಿಯ ಅಂತ್ಯಸಂಸ್ಕಾರ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನೆರವೇರಿತು. ಈ ಹತ್ಯೆಯ ಹಿನ್ನೆಲೆಯಲ್ಲಿ ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಭಾನುವಾರವೂ ಅನೇಕ ಅಂಗಡಿ- ಮುಂಗಟ್ಟುಗಳು ಬಹುತೇಕ ಬಾಗಿಲು ಮುಚ್ಚಿದ್ದವು. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು.

ಇಂಟರ್ನೆಟ್ ಬ್ಲಾಕ್
ಅತ್ಯಾಚಾರಿಯನ್ನು ಜೈಲಿನಿಂದ ಹೊರಗೆಳೆದು ಸಾರ್ವಜನಿಕರು ಹಲ್ಲೆ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿರುವುದು ನಾಗಾಲ್ಯಾಂಡ್ ಸರ್ಕಾರದ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಾಲದ ಮೇಲೆ ಸರ್ಕಾರ 48 ಗಂಟೆಗಳ ಕಾಲ ನಿಷೇಧ ಹೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com