ಅತ್ಯಾಚಾರ ತಡೆಗೆ ಕ್ರಮ: ಲಂಡನ್‍ನಲ್ಲಿ 11 ವರ್ಷದ ಮಕ್ಕಳಿಗೆ ಸೆಕ್ಸ್ ಕ್ಲಾಸ್

ಭಾರತದಲ್ಲಿ ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎಂಬ ಗೊಂದಲದಲ್ಲಿರುವಾಗಲೇ, ಲಂಡನ್‍ನಲ್ಲಿ 11 ವರ್ಷದ ಮಕ್ಕಳಿಗೆ ಅತ್ಯಾಚಾರ...
ಲೈಂಗಿಕ ಶಿಕ್ಷಣ(ಸಾಂದರ್ಭಿಕ ಚಿತ್ರ)
ಲೈಂಗಿಕ ಶಿಕ್ಷಣ(ಸಾಂದರ್ಭಿಕ ಚಿತ್ರ)
Updated on

ಲಂಡನ್: ಭಾರತದಲ್ಲಿ ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎಂಬ ಗೊಂದಲದಲ್ಲಿರುವಾಗಲೇ, ಲಂಡನ್‍ನಲ್ಲಿ 11 ವರ್ಷದ ಮಕ್ಕಳಿಗೆ ಅತ್ಯಾಚಾರ ಮತ್ತು ಸಹಮತ ಲೈಂಗಿಕಕ್ರಿಯೆ ಬಗ್ಗೆ ತಿಳಿವಳಿಕೆ ಕೊಡುವ ತರಗತಿ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ.

ವಯೋ ಸಹಜ ಲೈಂಗಿಕ ಒತ್ತಡಗಳನ್ನು ಅರಿಯಲು ಇದು ಸಹಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ. ಮಹಿಳಾ ದಿನದ ಅಂಗವಾಗಿ ದಿ ಸಂಡೆ ಟೈಮ್ಸ್ ಈ ಕುರಿತು ವರದಿ ಪ್ರಕಟಿಸಿದೆ. ಮಕ್ಕಳಿಗೆ ಶಾಲೆ, ಕಾಲೇಜುಗಳಲ್ಲಿ ಲೈಂಗಿಕ ಆಕರ್ಷಣೆ ಮತ್ತು ಅತ್ಯಾಚಾರಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು.

ಇದರಿಂದ ಅವರು ತಾವು ಕಠಿಣ ಪರಿಸ್ಥಿತಿ ಎದುರಿಸಲು ಸಹಾಯಕವಾಗಲಿದೆ. ಮಕ್ಕಳು ಅಶ್ಲೀಲ ಮತ್ತು ಲೈಂಗಿಕತೆ ನಡುವಿನ ವ್ಯತ್ಯಾಸವನ್ನು ಕಲಾವಿದರ ಅಭಿನಯದ ಮೂಲಕ ಅರ್ಥ ಮಾಡಿಸಲು ತರಗತಿಗಳಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಪ್ರಯತ್ನ ನಡೆಸಲಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com