ಮಗನ ಕೈಯಲ್ಲಿ ಗನ್: ಸಿಕ್ಕಿ ಬಿದ್ದ ಕ್ರಿಮಿನಲ್ ತಂದೆ

ಏಳು ವರ್ಷದ ಮಗು ಶಾಲೆಗೆ ಪಿಸ್ತೂಲ್ ಕೊಂಡು ಹೋಗಿ, ತಂದೆಯನ್ನು 18 ತಿಂಗಳ ಕಾಲ ಜೈಲು ಪಾಲಾಗುವಂತೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಫ್ರಾನ್ಸ್: ಏಳು ವರ್ಷದ ಮಗು ಶಾಲೆಗೆ ಪಿಸ್ತೂಲ್ ಕೊಂಡು ಹೋಗಿ, ತಂದೆಯನ್ನು 18 ತಿಂಗಳ ಕಾಲ ಜೈಲು ಪಾಲಾಗುವಂತೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಫ್ರಾನ್ಸ್‌ನ ಪ್ಯಾರಿಸ್‌ ಬಳಿಯ ಶಾಲೆಯೊಂದರಲ್ಲಿ ಏಳು ವರ್ಷದ ಮಗು ಅಪ್ಪನ ಪಿಸ್ತೂಲನ್ನು ಕೊಂಡೊಯ್ದಿತ್ತು. ಪಿಸ್ತೂಲ್ ನಲ್ಲಿ ಗುಂಡು ಇರದಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ, ಇದರಿಂದ ಹೆದರಿದ ಶಾಲೆಯ ಶಿಕ್ಷಕರು ಪೊಲೀಸರಿಗೆ ದೂರು ನೀಡಿದ್ದರು.
ಮಗುವಿನ ತಂದೆಯ ಕುರಿತು ತನಿಖೆ ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಕೆ ವೇಳೆ ಈತನೊಬ್ಬ ಕ್ರಿಮಿನಲ್ ವ್ಯಕ್ತಿಯಾಗಿದ್ದು, ಬೆಲ್ಜಿಯಂ ಮತ್ತು ಫ್ರಾನ್ಸ್ ಗಳಲ್ಲಿ ಸಾಕಷ್ಟು ಕೇಸ್ ಗಳು ದಾಖಲಾಗಿವೆ ಎಂಬ ಮಾಹಿತಿ ಸಿಕ್ಕಿದೆ.

ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯವು ಆತನಿಗೆ 18 ತಿಂಗಳ ಕಠಿಣ ಶಿಕ್ಷೆ ವಿಧಿಸಿದ್ದು, ದಂಡ ಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com